×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು ವಿಧಾನಸಭಾ ಕ್ಷೇತ್ರ ಎಸ್ ಡಿ ಪಿ ಐ ಅಭ್ಯರ್ಥಿಯಾಗಿ ಹನೀಫ್ ಮೂಳೂರುಗೆ ಬಿ ಫಾರಂ ನೀಡಿದ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ ಅಲಿ

ಮುಂಬರುವ ಕಾಪು ವಿಧಾನಸಭಾ ಕ್ಷೇತ್ರ ಚುನಾವಣೆಯ ಎಸ್ ಡಿ ಪಿ ಐ ಅಭ್ಯರ್ಥಿ ಹನೀಫ್ ಮೂಳೂರು ರವರಿಗೆ ಪಕ್ಷದ ಬಿ ಫಾರಂ ಉಡುಪಿ ಜಿಲ್ಲಾಧ್ಯಕ್ಷರಾದ ಶಾಹಿದ ಅಲಿ ನೀಡಿದರು ಈ ಸಂದರ್ಭದಲ್ಲಿ ಮಾತನಾಡಿದ ಈ ಚುನಾವಣೆಯಲ್ಲಿ ನಾನು ಗೆಲ್ಲಲಿ ಅಥವಾ ಸೋಲಲಿ ಸದಾ ಜನರ ಸೇವೆ ಮಾಡಲು ಸಿದ್ಧನಾಗಿರುತ್ತೇನೆ ಹಾಗೂ ನನ್ನನ್ನು ಶೋಷಿತ, ದಮನಿತ ವರ್ಗಗಳಿಗೆ ಹೋರಾಟ ಮಾಡಲು ಧ್ವನಿ ಎತ್ತಲು ಅವಕಾಶ ನೀಡಿದ ನಮ್ಮ ಪಕ್ಷದವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನನ್ನ ನಾಯಕರು ನನ್ನ ಮೇಲೆ ಭರವಸೆ ಇಟ್ಟಿದ ಆ ಭರವಸೆ ಉಳಿಸಲು ಸದಾ ನನ್ನ ಉಸಿರು ಇರುವವರಿಗೆ ಸಿದ್ಧನಾಗಿರುತ್ತೇನೆ…ಕಾಪು ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಹನೀಫ್ ಮೂಳೂರುರವರು ತಿಳಿಸಿದರು… ಈ ಸಂದರ್ಭದಲ್ಲಿ ಚುನಾವಣೆ ಉಸ್ತುವಾರಿಯಾದ ರಝಾಕ್ ವೈ ಎಸ್,ಉಡುಪಿ ಜಿಲ್ಲಾ ಉಪಾದ್ಯಕ್ಷರಾದ ಖಲೀಲ್ ಉಡುಪಿ, ಕಾಪು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಮೊಹಿದ್ದೀನ್ ಬೆಳಪು, ಇನ್ಚಾರ್ಜ್ ಯಾದ ಅಬ್ದುಲ್ಲಾ ಮಲಾರ್,ಕಾಪು ಎಸ್ ಡಿಪಿಐ ಪುರಸಭೆ ಸದಸ್ಯರಾದ ನೂರುದ್ದಿನ್, ಜಲಾಲ್ ಕೊಂಬ್ಬಗುಡ್ಡೆ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *