
ಹೈದರಾಬಾದ್ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 12 ರನ್‌ಗಳ ಅಂತರದಿಂದ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದೆ. ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಟೀಂ ಇಂಡಿಯಾ ನೀಡಿದ 350 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಕಿವೀಸ್ 337 ರನ್ ಗಳಿಸುವ ಮೂಲಕ ಸೋಲನ್ನು ಕಂಡಿತು. ಕೊನೆಗೂ ಮೈಕಲ್ ಬ್ರೇಸ್‌ವೆಲ್ ಅವರ ಸ್ಫೋಟಕ ಶತಕದ ಆಟ ವ್ಯರ್ಥವಾಯಿತು.ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿತು. ಒಂದು ಕಡೆ ವಿಕೆಟ್ ಗಳು ಬೀಳುತ್ತಿದ್ದರು ಇದನ್ನು ಲೆಕ್ಕಿಸದ ಆಡಿದ ಗಿಲ್ ಹೊಸ ದಾಖಲೆಯನ್ನೇ ಬರೆದರು. ಶುಭಮನ್ ಗಿಲ್ 149 ಎಸೆತಗಳನ್ನು ಎದುರಿಸಿ 19 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್ ಗಳ ನೆರವಿನಿಂದ 208 ರನ್ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಭಾರತ ಪರ ದ್ವಿಶತಕ ಸಿಡಿಸಿದ ಅತಿ ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.

