×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು ಹೊಸ ಮಾರಿಗುಡಿಗೆ – ರಾಜ್ಯ ಸಭಾ ಸದಸ್ಯೆ ಜಯಪ್ರಧಾ ಭೇಟಿ, ಗುಡ್ಡ ಪಾಣಾರರವರಿಗೆ ಸನ್ಮಾನ –

ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮಾಜಿ ಲೋಕಸಭೆ ಹಾಗೂ ಹಾಲಿ ರಾಜ್ಯಸಭೆ ಸದಸ್ಯೆ, ಪಂಚ ಭಾಷಾ ನಟಿ ಜಯಪ್ರಧಾ ಅವರು ಮಂಗಳವಾರ ಆಗಮಿಸಿ ದೇವರ ದರ್ಶನ ಪಡೆದು ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮಾರಿಯಮ್ಮನ ದೇವಸ್ಥಾನವನ್ನು ವೀಕ್ಷಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ತಂತ್ರಿ ರವರು ದೇವರಲ್ಲಿ ಪ್ರಾರ್ಥಿಸಿ ಅವರಿಗೆ ಪ್ರಸಾದ ವಿತರಿಸಿದರು.

ಇದೇ ಸಂದರ್ಭ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂಳೂರಿನ ಗುಡ್ಡ ಪಾಣಾರ ದಂಪತಿಯವರನ್ನು ದೇವಳದ ವತಿಯಿಂದ ಜಯಪ್ರಧಾರವರು ಸನ್ಮಾನಿಸಲಾಯಿತು ಈ ಸಂದರ್ಭ ದೇವಾಲಯದ ಕಾರ್ಯನರ‍್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ , ಆಡಳಿತ ಮುಖ್ಯಸ್ಥರಾದ ರಮೇಶ್ ಹೆಗ್ಡೆ ಕಲ್ಯಾ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ ವಾಸುದೇವ ಶೆಟ್ಟಿ, ನಡಿಕೆರೆ ರತ್ನಾಕರ ಶೆಟ್ಟಿ, ಉಪಾಧ್ಯಕ್ಷರಾದ ಮಾಧವ ಪಾಲನ್, ಗಂಗಾಧರ ಸುವರ್ಣ, ಹರೀಶ ಶೆಟ್ಟಿ ಎಮಾಳು, ದೇವಿಪ್ರಸಾದ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಅನಿಲ್ ಬಳ್ಳಾಲ್, ದಿನೇಶ್‌ ಶೆಟ್ಟಿ ಕಲ್ಯ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *