×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಅವಹೇಳನಾಕಾರಿಯಾಗಿ ಕಮೆಂಟ್ ಮಾಡುವ ಕಿಡಿಗೇಡಿಗಳಿಗೆ ವಾರ್ನಿಂಗ್ ಕೊಟ್ಟು ಪ್ರತಿಭಾ

ಮಂಗಳೂರು;ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕುಳಾಯಿ ಅವರನ್ನು ಅವಹೇಳನಾಕಾರಿಯಾಗಿ ಟ್ರೋಲ್ ಮಾಡಿದ ಬಗ್ಗೆ ಪ್ರತಿಭಾ ಮಾದ್ಯಮ ಹೇಳಿಕೆ ನೀಡಿದ್ದಾರೆ ನನ್ನನ್ನು ನಾಗವಲ್ಲಿ ಅಂತ ಟ್ರೋಲ್ ಮಾಡುತ್ತಿದ್ದಾರೆ ನಾನು ಆ ಸಿನಿಮಾದಲ್ಲಿರುವ ನಾಗವಳ್ಳಿ ಅಲ್ಲ ನಾನು ಒರಿಜಿನಲ್ ನಾಗವಲ್ಲಿ, ಅಶ್ಲೀಲವಾಗಿ ಟ್ರೋಲ್ ಮಾಡಿದವರ ಮನೆಗೆ ಮಧ್ಯರಾತ್ರಿ ಹೋಗಿ ಬಾಗಿಲು ಬಡಿಯುತ್ತೇನೆ. ನಾನು ಕಾನೂನು ಹೋರಾಟ ಮಾಡುತ್ತೇನೆ ಇಷ್ಟಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ‌.

ನಾನು ರಾಣಿ ಅಬ್ಬಕ್ಕನ ಊರಲ್ಲಿ ಹುಟ್ಟಿದವಳು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ ನನ್ನ ಧೈರ್ಯಕ್ಕೆ ಮುಖ್ಯವಾದ ಕಾರಣ ನನ್ನ ವಿದ್ಯೆ. ನಾನು ಇಂಥ ಟ್ರೋಲ್ ಗಳಿಗೆ ಜಗ್ಗುವವಳಲ್ಲ, ಟೋಲ್ಗೇಟ್ ವಿರೋಧಿ ಹೋರಾಟದಲ್ಲಿ ನಾನು ಇನ್ನು ಮುಂದೆ ಕೂಡ ಭಾಗವಹಿಸುತ್ತೇನೆ. ಯಾರೋ ಟ್ರೋಲ್ ಮಾಡಿ ಇದು ಕಾಂತಾರ 2ಅಂತ ಹೇಳಿದ್ದಾರೆ ನಾನು ಹೇಳ್ತೇನೆ ಇದು ಕಾಂತಾರ 3. ಕಾಂತಾರ 1 ಆದದ್ದು ಕೋಡಿಕೆರೆಯ ಗೂಂಡಾಗಳನ್ನು 8ವರ್ಷಗಳ ಹಿಂದೆ ಮಟ್ಟ ಹಾಕಿದ್ದಾಗ. ಕಾಂತರ 2 ಅಬ್ದುಲ್ ಸತ್ತಾರ್ ಎನ್ನುವ ಕಾಮುಕ ಹೆಣ್ಣು ಮಕ್ಕಳಿಗೆ ಹಿಂಸೆ ನೀಡುತ್ತಿದ್ದಾಗ ಅವನಿಗೆ ಥಳಿಸಿದ್ದೇನೆ, ಈ ಹೋರಾಟದಲ್ಲಿ ನಾನು ಭಾಗವಹಿಸಿದ್ದು ಕಾಂತಾರ 3. ಇನ್ನು ಮುಂದೆ ಕಾಂತಾರ 4 ಸುರತ್ಕಲ್ ನಲ್ಲಿ ಬೆಳೆದು ನಿಂತಿರುವ ಬೃಹತ್ ಕಟ್ಟಡ. ಕಾಂತಾರ 5 ಎಂಆರ್ ಪಿಎಲ್ ನಲ್ಲಿ ನಮ್ಮ ಯುವಕರಿಗೆ ಉದ್ಯೋಗ ನೀಡುತ್ತಿಲ್ಲ ಅದರ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.  ಅವರು ಟ್ರೊಲ್ ಮಾಡಿದವನ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವ ಹಕ್ಕಿದೆ. ಮುಂಬರುವ ದಿನಗಳಲ್ಲಿ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಇದು ಇನ್ನೂ ವಿಕೋಪಕ್ಕೆ ಹೋದಾಗ ಬಿಜೆಪಿ ನಾಯಕರು ಬಂದು ಇಲ್ಲ ಇಲ್ಲ ಅದು ಬಿಜೆಪಿ ಕಾರ್ಯಕರ್ತರು ಮಾಡಿದ್ದಲ್ಲ ಯಾರೋ ಜಿಹಾದಿಗಳು ಮಾಡಿರಬೇಕೆಂದು ಹೇಳಬಹುದೇನೋ. ನಾನು ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ಕೊಡುತ್ತಿದ್ದೇನೆ ಅವರು ನ್ಯಾಯ ಕೊಡಿಸುವಲ್ಲಿ ವಿಫಲರಾದರೆ ಮುಂದೆ ಏನು ಮಾಡಬೇಕೆಂದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *