
ಕಾಪು ತಾಲೂಕಿನ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆಯು ವಿಜೃಂಭಣೆಯಿಂದ ಜರಗಿತು. ಸಮವಸ್ತ್ರಧಾರಿಗಳಾಗಿ ಕೆಲಸದೊತ್ತಡದಿಂದ ಇರುತ್ತಿದ್ದ ಪೊಲೀಸರು ಒಂದೇ ರೀತಿಯ ಬಣ್ಣದ ಬಟ್ಟೆ ಧರಿಸಿ ಆಯುಧ ಪೂಜೆಯಲ್ಲಿ ಪಾಲ್ಗೊಂಡರು. ಪಡುಬಿದ್ರಿ ಪೋಲಿಸ್ ಠಾಣಾಧಿಕಾರಿ ಪುರುಷೋತ್ತಮ್, ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.

