ಉಳಿಯಾರಗೋಳಿ: ಗ್ರಾಮೀಣ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸುವ ಉದ್ದೇಶದಿಂದ ಸಮಾರಂಭವು ಕಾಪು ಅಂಚೆ ಕಚೇರಿಯ ಎದುರುಗಡೆ ನಡೆಯಿತು.
, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಸೇರಿದಂತೆ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗ್ಯಾರಂಟಿ ಯೋಜನೆಗಳು ಸರ್ಕಾರದ ಬದ್ಧತೆಯ ಪ್ರತೀಕ
– ಕೆ. ಪಿ. ಸಿ. ಸಿ ಪ್ರಚಾರ ಸಮಿತಿ ಉಪಾಧ್ಯಕ್ಷರು ಸುಧೀರ್ ಕುಮಾರ್ ಮುರೊಳ್ಳಿ , ಮಾತನಾಡಿ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಜನರಿಗೆ ನೀಡಿದ ಮಾತಿನಂತೆ ನಡೆದುಕೊಳ್ಳುತ್ತಿರುವುದು ಶ್ಲಾಘನೀಯ .- ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ಸಮಾವೇಶದ ಅಂಗವಾಗಿ ಆಧಾರ್ ಇ-ಕೆವೈಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ,, “ಸರ್ಕಾರ ನುಡಿದಂತೆ ನಡೆದಿದ್ದು, ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿಯೊಂದು ಕುಟುಂಬಕ್ಕೂ ಆರ್ಥಿಕ ಭದ್ರತೆ ಒದಗಿಸಿದೆ. ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಯರಿಗೆ ಸಿಗುತ್ತಿರುವ ಮಾಸಿಕ 2,000 ರೂಪಾಯಿ ಸಹಾಯಧನವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೊಸ ದಿಕ್ಕು ನೀಡಿದೆ” “ಕಳೆದ ಮೂರು ವರ್ಷಗಳಲ್ಲಿ ನಿಜವಾದ ಫಲಾನುಭವಿಗಳು ಯಾರೆಂಬುದನ್ನೇ ನಾವು ಸರಿಯಾಗಿ ನೋಡಲಿಲ್ಲ, ಮೃತಪಟ್ಟವರ ಖಾತೆಗೂ ಹಣ ಜಮೆಯಾಗುತ್ತಿದೆ” ಅರ್ಹರಿಗೆ ಮಾತ್ರ ಯೋಜನೆಯ ಲಾಭ ತಲುಪಿಸಲು ರಾಜ್ಯ ಸರ್ಕಾರ ಇದೀಗ ‘ರಿನಿವಲ್’ ಹಾಗೂ ಪರಿಶೀಲನಾ ಪ್ರಕ್ರಿಯೆಗೆ ಮುಂದಾಗಿದ್ದು. ಈ ಕಾರ್ಯಕ್ರಮ ನಡೆಸುವ ಮೂಲಕ ಮುಂದಿನ ದಿನಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ನಿರಂತರವಾಗಿ ಸಿಗಲಿ ಎಂದು ಈ ಸಂದರ್ಭದಲ್ಲಿ ತಿಳಿಸಿದರು
ವಿನಯ್ ಕುಮಾರ್ ಸೊರಕೆ – ಕೆ. ಪಿ. ಸಿ. ಸಿ. ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರು, ಎಂ. ಎ. ಗಫೂರ್ – ಅಧ್ಯಕ್ಷರು – ಕರಾವಳಿ ಅಭಿವೃದ್ಧಿ ಮಂಡಳಿ, ಸುಧೀರ್ ಕುಮಾರ್ ಮುರೊಳ್ಳಿ – ಕೆ. ಪಿ. ಸಿ. ಸಿ ಪ್ರಚಾರ ಸಮಿತಿ ಉಪಾಧ್ಯಕ್ಷರು, ಪ್ರಭಾಕರ್ ಪೂಜಾರಿ – ಅಧ್ಯಕ್ಷರು – ಕಾಪು ನಗರ ಕಾಂಗ್ರೆಸ್ ಸಮಿತಿ, ಕಾಪು ದಿವಾಕರ ಶೆಟ್ಟಿ – ಉಪಾಧ್ಯಕ್ಷರು – ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ, ನವೀನ್ ಚಂದ್ರ ಸುವರ್ಣ – ಅಧ್ಯಕ್ಷರು – ಕಾಪು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ, ಗೀತಾ ವಾಗ್ಲೇ – ಉಪಾಧ್ಯಕ್ಷರು – ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ, ಶರ್ಫುದ್ದೀನ್ ಶೇಕ್ – ಅಧ್ಯಕ್ಷರು – ಜಿಲ್ಲಾ ಕಾಂಗ್ರೆಸ್ ಅಲ್ಫಾಸಂಖ್ಯೆತರ ಘಟಕ, ಪ್ರಶಾಂತ್ ಜತ್ತನ್ನ ಉಪಾಧ್ಯಕ್ಷರು – ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ, ದೇವರಾಜ್ ಎ. ಕೋಟ್ಯಾನ್ ಅಧ್ಯಕ್ಷರು – ಕಾಪು ಗ್ರಾಮೀಣ ಕಾಂಗ್ರೆಸ್ ಸಮಿತಿ, ಹಸನಬ್ಬ ಶೇಕ್ – ಅಧ್ಯಕ್ಷರು – ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ, ಪುರಸಭಾ ಸದಸ್ಯರುಗಳಾದ ಫರ್ಜಾನ ಸಂಜಯ್, ಶೋಭಾ ಎ. ಬಂಗೇರ, ರಾಧಿಕಾ ಸದಾನಂದ ಸುವರ್ಣ, ವಿದ್ಯಾಲತಾ ಆನಂದ್, ಸತೀಶ್ ಚಂದ್ರ ಮೂಳೂರು, ಮೊಹಮ್ಮದ್ ಆಸೀಫ್, ಶಾಂತಲತಾ ಎಸ್. ಶೆಟ್ಟಿ, ಬಬ್ಬಣ್ಣ ನಾಯಕ್, ಪಕ್ಷದ ಮುಖಂಡರುಗಳಾದ – ಸುಧೀರ್ ಕರ್ಕೇರ, ಆಶಾ ಅಂಚನ್ ಕಟಪಾಡಿ, ಲಕ್ಷ್ಮೀಶ ತಂತ್ರಿ, ನಡಿಕೆರೆ ರತ್ನಾಕರ್ ಶೆಟ್ಟಿ, ನವೀನ್ ಎನ್. ಶೆಟ್ಟಿ, ರಾಜೇಶ್ ಕುಲಾಲ್, ಹಸನ್ ಬಾವ, ರೀನಾ ಡಿಸೋಜ, ಸವಿತಾ ಕುಂದರ್, ಅಶ್ವಿನಿ ಬಂಗೇರ, ಅಖಿಲೇಶ್ ಕೋಟ್ಯಾನ್, ಶೇಖರ್ ಸಾಲ್ಯಾನ್, ಗೌರೀಶ್ ಕಟಪಾಡಿ, ರವಿ ಮಂದಾರ, ಬಾಲಕೃಷ್ಣ ಕೋಟ್ಯಾನ್, ಪ್ರಭಾಕರ್ ಆಚಾರ್ಯ, ಅಶೋಕ್ ನಾಯರಿ, ಹರೀಶ್ ಕೈಪುಂಜಾಲ್, ಉದಯ ಸನಿಲ್,ಮತ್ತಿತರ ಪ್ರಮುಖರು, ಕಾರ್ಯಕರ್ತರು ಮತ್ತು ಅಪಾರ ಸಂಖ್ಯೆಯಲ್ಲಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಉಪಸ್ಥಿತರಿದ್ದರು.
ಪ್ರಾರ್ಥನೆ – ಸಂಧ್ಯಾ ಬಾಲಕೃಷ್ಣ ಕೋಟ್ಯಾನ್,
ಸ್ವಾಗತ – ಕಾಪು ದಿವಾಕರ್ ಶೆಟ್ಟಿ
ಧನ್ಯವಾದ – ಪ್ರಭಾಕರ್ ಪೂಜಾರಿ
ಕಾರ್ಯಕ್ರಮ ನಿರೂಪಣೆ – ಅಮೀರ್ ಕಾಪು – ಪ್ರಧಾನ ಕಾರ್ಯದರ್ಶಿ = ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ.ಆಶಾ ಕಾರ್ಯಕರ್ತರು, ಅಂಗನವಾಡಿ ಸಿಬ್ಬಂದಿಗೆ ಸನ್ಮಾನ
ಕಾರ್ಯಕ್ರಮದ ಅಂಗವಾಗಿ ಉಳಿಯಾರಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಶಿಕ್ಷಕರು, ಕಾರ್ಯಕರ್ತರು ಹಾಗೂ ಮೆಸ್ಕಾಂ ಸಿಬ್ಬಂದಿ ಸೇರಿದಂತೆ ಸನ್ಮಾನಿಸಿ ಗೌರವಿಸಲಾಯಿತು.

