ಕುಂದಾಪುರ: ನಗರದ ಶಾಸ್ತ್ರಿ ಪಾರ್ಕ್ ವೃತ್ತದ ಸಮೀಪ, ಶಿವಪ್ರಸಾದ್ ಗ್ರಾಂಡ್ ಎದುರು ನೂತನವಾಗಿ ಆರಂಭಗೊಂಡ ‘ಸಿತಾರ ಮಲ್ಟಿಕ್ಯೂಸಿನ್ ರೆಸ್ಟೋರೆಂಟ್’ ಇಂದು ಗಣ್ಯರ ಉಪಸ್ಥಿತಿಯಲ್ಲಿ ಶುಭಾರಂಭಗೊಂಡಿತು.
ಶ್ರೀ ಕ್ಷೇತ್ರ ಕೊಲ್ಲೂರಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಬಾಬು ಶೆಟ್ಟಿ ತಗ್ಗರ್ಸೆ ಅವರು ನೂತನ ರೆಸ್ಟೋರೆಂಟ್‌ನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಮಾರಣಕಟ್ಟೆಯ ಆಡಳಿತ ಮೊಕ್ತೇಸರರಾದ ಶ್ರೀ ಸದಾಶಿವ ಶೆಟ್ಟಿ, ಶ್ರೀ ಶನೀಶ್ವರ ಕ್ಷೇತ್ರ ಜೋನಮನೆ, ಆಜಿಯ ಆಡಳಿತ ಮೊಕ್ತೇಸರರಾದ ಶ್ರೀ ಅಶೋಕ್ ಶೆಟ್ಟಿ ಆಜಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಕಿರಣ್ ಕುಮಾರ್ ಕೊಡ್ಲಿ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಗುರುರಾಜ ಶೆಟ್ಟಿ ಗಂಟಿಹೊಳೆ, ಕುಂದಾಪುರದ ಮಾಜಿ ಶಾಸಕ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರಿನ ಮಾಜಿ ಶಾಸಕರಾದ ಶ್ರೀ ಬಿ.ಎಂ. ಸುಕುಮಾರ ಶೆಟ್ಟಿ ಹಾಗೂ ಶ್ರೀ ಕೆ. ಗೋಪಾಲ ಪೂಜಾರಿ, ಕುಂದಾಪುರದ ಕಾಂಗ್ರೆಸ್ ಮುಖಂಡ ಶ್ರೀ ದಿನೇಶ್ ಹೆಗ್ಡೆ ಮೊಳಹಳ್ಳಿ, ಲೆಕ್ಕ ಪರಿಶೋಧಕ ಶ್ರೀ ಪ್ರೇಮಾನಂದ ಶೆಟ್ಟಿ ಅಂಪಾರು ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಹಾಗೂ ಶ್ರೀ ಶನೀಶ್ವರ ದೇವರ ಅನುಗ್ರಹದೊಂದಿಗೆ ಆರಂಭಗೊಂಡಿರುವ ಈ ರೆಸ್ಟೋರೆಂಟ್‌ನಲ್ಲಿ ಗ್ರಾಹಕರಿಗೆ ವಿವಿಧ ಬಗೆಯ ಆಹಾರ ಖಾದ್ಯಗಳನ್ನು ಸವಿಯುವ ಅವಕಾಶ ಕಲ್ಪಿಸಲಾಗಿದೆ. ಉತ್ತರ ಭಾರತೀಯ, ಚೈನೀಸ್ ಹಾಗೂ ಸೀಫುಡ್ ಸೇರಿದಂತೆ ವಿವಿಧ ಶೈಲಿಯ ಆಹಾರ ಪದಾರ್ಥಗಳು ಇಲ್ಲಿ ಲಭ್ಯವಿರಲಿವೆ.
ವಿಶೇಷವಾಗಿ ಕರಾವಳಿ ಭಾಗದ ಜನರ ನೆಚ್ಚಿನ ತಾಜಾ ಸಮುದ್ರಾಹಾರ ಖಾದ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಚಿಕನ್ ತಂದೂರಿ, ಫಿಶ್ ತಂದೂರಿ, ಸೀಗಡಿ ಖಾದ್ಯಗಳು, ಫಿಶ್ ತಾಳಿ, ಪಾಂಪ್ರೇಟ್, ಮೀನಿನ ಕರಿ, ಅನ್ನ ಹಾಗೂ ವಿವಿಧ ಬಗೆಯ ರೋಟಿಗಳು ಸೇರಿದಂತೆ ಹಲವು ಬಗೆಯ ಆಹಾರಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತದೆ.
ಕುಟುಂಬ ಸಮೇತರಾಗಿ ಆಗಮಿಸಿ ಊಟೋಪಚಾರ ಸವಿಯಲು ಅನುಕೂಲವಾಗುವಂತೆ ವಿಶಾಲವಾದ ಊಟದ ಸ್ಥಳ ಹಾಗೂ ಆತ್ಮೀಯ ವಾತಾವರಣವನ್ನು ವ್ಯವಸ್ಥೆ ಮಾಡಲಾಗಿದೆ. ಶುಚಿತ್ವಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸ್ವಚ್ಛ ಅಡುಗೆಮನೆಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ರುಚಿಕರ ಹಾಗೂ ತಾಜಾ ಆಹಾರವನ್ನು ಗ್ರಾಹಕರಿಗೆ ಒದಗಿಸುವ ಉದ್ದೇಶದೊಂದಿಗೆ ರೆಸ್ಟೋರೆಂಟ್ ಕಾರ್ಯಾರಂಭಿಸಿದೆ.
ಇದರೊಂದಿಗೆ ಗ್ರಾಹಕರ ಅನುಕೂಲಕ್ಕಾಗಿ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಉಚಿತ ಹೋಮ್ ಡೆಲಿವರಿ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ.
ಕುಂದಾಪುರದ ಕುಂದೇಶ್ವರ ಕಾಂಪ್ಲೆಕ್ಸ್ ಸಮೀಪ, ಸಿಟಿ ಮೆಡಿಕಲ್ ಹತ್ತಿರ, ಶಿವಪ್ರಸಾದ್ ಗ್ರಾಂಡ್ ಎದುರುಗಡೆ, ಶಾಸ್ತ್ರಿ ಪಾರ್ಕ್ ವೃತ್ತದಲ್ಲಿ ರೆಸ್ಟೋರೆಂಟ್ ಕಾರ್ಯನಿರ್ವಹಿಸಲಿದೆ.
ರೆಸ್ಟೋರೆಂಟ್‌ನ ಪಾಲುದಾರರಾದ ಸದೀಪ್ ಕೆ. ಶೆಟ್ಟಿ ನೂಜಾಡಿ, ಪ್ರವೀಣ್ ಶೆಟ್ಟಿ ಕಾಳಾವರ ಹಾಗೂ ಕಾರ್ತಿಕ್ ಶೆಟ್ಟಿ ನಟ್ಟಿಬೈಲ್ ಅವರು ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ, ಶುಭಾರಂಭ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

