×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮೂಡ್ಲಕಟ್ಟೆ: ವಿವಿಧ ಕಾಲೇಜುಗಳ ಸ್ಪರ್ಧೆಗಳಲ್ಲಿ ಎಂಐಟಿಕೆ ಮೀಡಿಯಾ ಕ್ಲಬ್ ‘ಫ್ರೇಮ್‌ಎಕ್ಸ್’ ವಿದ್ಯಾರ್ಥಿಗಳ ಸಾಧನೆ

ಪ್ರತಿಷ್ಠಿತ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಮೀಡಿಯಾ ಕ್ಲಬ್ ಆಗಿರುವ ‘ಫ್ರೇಮ್‌ಎಕ್ಸ್’ (FrameX) ನ ಸಕ್ರಿಯ ಸದಸ್ಯರು ವಿವಿಧ ಕಾಲೇಜುಗಳಲ್ಲಿ ಆಯೋಜಿಸಲಾಗಿದ್ದ ಅಂತರ-ಕಾಲೇಜು ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಹಲವು ಬಹುಮಾನಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಮೀಡಿಯಾ ಕ್ಲಬ್‌ನ ಪ್ರತಿಭಾವಂತ ವಿದ್ಯಾರ್ಥಿಗಳಾದ ಸ್ಪೃತಿಕ್ ಎನ್. ನಾಯ್ಕ್ ಮತ್ತು ಕಾರ್ತಿಕ್ ಎನ್. ನಾಯ್ಕ್ ಅವರು ತಮ್ಮ ಅದ್ಭುತ ಪ್ರತಿಭೆಯ ಮೂಲಕ ವಿವಿಧ ಕಾಲೇಜುಗಳ ರೀಲ್ಸ್ ಮೇಕಿಂಗ್ ಹಾಗೂ ವೀಡಿಯೋಗ್ರಫಿ ಸ್ಪರ್ಧೆಗಳಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಎನ್‌ಐಟಿಕೆ (NITK) ಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸ್ಪೃತಿಕ್ ಎನ್. ನಾಯ್ಕ್ ಅವರು ಪ್ರಥಮ ಸ್ಥಾನವನ್ನು ಹಾಗೂ ಕಾರ್ತಿಕ್ ಎನ್. ನಾಯ್ಕ್ ಅವರು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ, ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕಾರ್ತಿಕ್ ಎನ್. ನಾಯ್ಕ್ ಅವರು ಪ್ರಥಮ ಸ್ಥಾನವನ್ನು ಮತ್ತು ಸ್ಪೃತಿಕ್ ಎನ್. ನಾಯ್ಕ್ ಅವರು ದ್ವಿತೀಯ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ, ಶ್ರೀ ಶಾರದಾ ಕಾಲೇಜಿನಲ್ಲಿ ನಡೆದ ಸ್ಪರ್ಧೆಯಲ್ಲಿ ಕಾರ್ತಿಕ್ ಎನ್. ನಾಯ್ಕ್ ಅವರು ಪ್ರಥಮ ಬಹುಮಾನವನ್ನು ಗೆಲ್ಲುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವರ್ಗ, ಮೀಡಿಯಾ ಕ್ಲಬ್‌ನ ಮಾರ್ಗದರ್ಶಕರು ಹಾಗೂ ಸಹಪಾಠಿಗಳು ಹರ್ಷ ವ್ಯಕ್ತಪಡಿಸಿ, ಮುಂದಿನ ಭವಿಷ್ಯಕ್ಕೆ ಶುಭಕೋರಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *