×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮಜೂರು ಗ್ರಾಮೀಣ ಕಾಂಗ್ರೆಸ್ ಸಮಿತಿವತಿಯಿಂದ ಗೃಹಲಕ್ಷ್ಮಿ ಫಲಾನುಭವಿಗಳ ಸಮಾವೇಶ

ಮಜೂರು ಗ್ರಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ ಗೃಹಲಕ್ಷ್ಮಿ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಅತಿ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಂಡ ಜಿಲ್ಲೆಗಳಲ್ಲಿ ಉಡುಪಿ ಪ್ರಮುಖ ಸ್ಥಾನದಲ್ಲಿದೆ. ಶಕ್ತಿ ಯೋಜನೆ, ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ಐದು ಯೋಜನೆಗಳಿಂದ ಕರಾವಳಿ ಭಾಗದ ಸಾವಿರಾರು ಕುಟುಂಬಗಳು ನೇರ ಲಾಭ ಪಡೆಯುತ್ತಿವೆ “ಬೆಲೆ ಏರಿಕೆಯ ಈ ದಿನಗಳಲ್ಲಿ ಪ್ರತಿ ತಿಂಗಳು ಮಹಿಳೆಯರ ಖಾತೆಗೆ ತಲುಪುತ್ತಿರುವ 2,000 ರೂಪಾಯಿ ಹಣವು ಲಕ್ಷಾಂತರ ಕುಟುಂಬಗಳಿಗೆ ದೊಡ್ಡ ಆಸರೆಯಾಗಿದೆ. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ದೊಡ್ಡದಾಗಿದ್ದು, ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದೇ ನಮ್ಮ ಸರ್ಕಾರದ ಮುಖ್ಯ ಗುರಿ”

.ವಿರೋಧ ಪಕ್ಷಗಳು ಎಷ್ಟೇ ಟೀಕೆಗಳನ್ನು ಮಾಡಿದರೂ, ನಾವು ನುಡಿದಂತೆ ನಡೆದಿದ್ದೇವೆ. ಪ್ರತಿಯೊಬ್ಬ ತಾಯಿಯ ಮುಖದಲ್ಲಿ ಸಂತಸ ತರುವುದೇ ಗೃಹಲಕ್ಷ್ಮಿ ಯೋಜನೆಯ ಮೂಲ ಉದ್ದೇಶ. ಈ ಯೋಜನೆಯು ರಾಜ್ಯದ ಆರ್ಥಿಕತೆಗೆ ಹಾಗೂ ಸಣ್ಣ ಪ್ರಮಾಣದ ಕುಟುಂಬಗಳಿಗೆ ದೊಡ್ಡ ಶಕ್ತಿಯಾಗಿ ಪರಿಣಮಿಸಿದೆ ಎಂದು ಹೇಳಿದರು

ಇದೇ ಸಂದರ್ಭದಲ್ಲಿ, ಸಮಾಜಕ್ಕೆ ನಿರಂತರವಾಗಿ ಅಪಾರ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು, ವಿದ್ಯುತ್ ಇಲಾಖೆಯ ಲೈನ್ ಮ್ಯಾನ್ ಗಳು ಹಾಗೂ ಸ್ಥಳೀಯ ವಿವಿಧ ಕ್ಷೇತ್ರದ ಸಾಧಕರನ್ನು ವೇದಿಕೆಯ ಮೇಲೆ ಗುರುತಿಸಿ, ಶಾಲು ಹೊದಿಸಿ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ವಿನಯ್ ಕುಮಾರ್ ಸೊರಕೆ ವೈ ಸುಕುಮಾರ್ ನವೀನ್ ಚಂದ್ರ ಸುವರ್ಣ ದಿವಾಕರ್ ಶೆಟ್ಟಿ ನಾಗಭೂಷಣ್ ರಾವ್ ಶರ್ಫುದ್ದೀನ್ ಶೇಖ್
ಝೇಭಾ ಸೆಲ್ವನ್ ನಕ್ವಾ ಯಹಿಯಾ ಹಸನಬ್ಬ ಶೇಖ್ ಎಚ್ ಅಬ್ದುಲ್ಲಾ ಸುಲಕ್ಷಣ್ ಪೂಜಾರಿ ಬಾಸ್ಕರ್ ಪೂಜಾರಿ ಪ್ರಭಾಕರ ಆಚಾರ್ಯ ದೀಪಕ್ ಎರ್ಮಾಳ್ ಇಮ್ರಾನ್ ಮಜೂರು ಸಾದಿಕ್ ದಿನಾರ್ ಪ್ರಕಾಶ್ ಶೆಟ್ಚಿ ಪ್ರಕಾಶ್ ಪಾಲಮೆ ಹಾಜಬ್ಬ ಕರಂದಾಡಿ ಶಂಶುದ್ದೀನ್ ಕರಂದಾಡಿ ಅಬ್ದುಲ್ ರಝಾಕ್ ಕರಂದಾಡಿ ಸಾಬನ್ ಕರಂದಾಡಿ ಸೈಲೇಂದ್ರ ಕುಮಾರ್ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *