×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪ್ರಯತ್ನ ನಿರಂತರವಾಗಿರಲಿ: ಶ್ರೀಮತಿ. ಜಯಂತಿ ವಾಸುದೇವ

ಬ್ರಹ್ಮಾವರ, ಜು. 15: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ಸೆಟ್) ಸಂಸ್ಥೆ, ಬ್ರಹ್ಮಾವರ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ. ಜಯಂತಿ ವಾಸುದೇವ, ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತಿ, ಚಾಂತರು, ಬಾರ್ಕೂರು ಅನ್ನಪೂರ್ಣೇಶ್ವರಿ ದೇವಸ್ಥಾನದ ಮಹಿಳಾ ಸಂಘದ ಅಧ್ಯಕ್ಷರು ಅವರು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು.

ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಬಂದು ಈ ರೀತಿ ತರಬೇತಿ ಪಡೆದುಕೊಂಡು ಮುಂದೆ ಬಂದಿರುವುದು, ಹೆಮ್ಮೆಯ ವಿಚಾರ. ಕಲಿಕೆ ಅನ್ನುವುದು ನಿರಂತರವಾಗಿರುವುದು, ಹಾಗಾಗಿ ಯಶಸ್ಸಿನ ಕೀಲಿ ಕೈ ನಿರಂತರವಾಗಿರುವ ಪ್ರಯತ್ನ. ಸಂಸ್ಥೆಯು ನಿರಂತರವಾಗಿ ಇಂತಹ ತರಬೇತಿಗಳನ್ನು ನೀಡುತ್ತಾ ಬಂದಿದ್ದು, ಸಾವಿರಾರು ಅಭ್ಯರ್ಥಿಗಳು ತರಬೇತಿಯನ್ನು ಪಡೆದು ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ. ಯಶಸ್ಸಿನ ಮೆಟ್ಟಿಲನ್ನು ಹತ್ತಬೇಕಾದರೆ, ಮುಖ್ಯವಾಗಿ ಶ್ರದ್ಧೆ ಹಾಗೂ ಪ್ರಯತ್ನ ಬೇಕಾಗುತ್ತದೆ. ತರಬೇತಿಯ ಯಶಸ್ಸು ನೀವು ಸ್ವಂತ ಉದ್ಯಮವನ್ನು ಕೈಗೊಂಡಾಗ ಲಭಿಸುತ್ತದೆ. ಹಾಗಾಗಿ ಪ್ರಯತ್ನ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ. ಮಾತನಾಡಿ, ಒಂದು ತಿಂಗಳಲ್ಲಿ ಇಷ್ಟೊಂದು ವಿಚಾರಗಳನ್ನು ಕಲಿತಿದ್ದೀರಿ, ಇಸ್ಟೊಂದು ಡಿಸೈನ್ ಗಳನ್ನು ಕಲಿತೀರಿ ಅನ್ನುವುದನ್ನು ನೀವು ಅಂದುಕೊಳ್ಳದೇ ಇರುವುದನ್ನು ಮಾಡಿ ತೋರಿಸಿದ್ದೀರಿ. ಹಾಗಾದ್ರೆ ತಮ್ಮಲ್ಲಿ ಪ್ರತಿಯೊಬರಲ್ಲಿನ ಸಾಮರ್ಥ್ಯವನ್ನು ಈಗ ಅವಲೋಕನ ಮಾಡಿಕೊಳ್ಳಿ, ಅದೇ ಸಾಮರ್ಥ್ಯವನ್ನು ಮುಂದಿನ ಜವಾಬ್ದಾರಿ ಯುತವಾಗಿ ನಿಮ್ಮ ಕನಸು ನನಸಾಗಿಸಲು ಪ್ರಯತ್ನವನ್ನು ತಪ್ಪದೆ ಮಾಡಿ ಎಂದರು. ತರಬೇತಿಯ ಸಂದರ್ಭದಲ್ಲಿ ಪಡೆದ ಅನುಭವ ಹಾಗೂ ಜ್ಞಾನವನ್ನು ತಮ್ಮ ಕುಟುಂಬದವರು, ಸ್ನೇಹಿತರು ಹಾಗೂ ಇತರರೊಂದಿಗೆ ಹಂಚಿಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಕರೆ ನೀಡಿ, ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಉಪನ್ಯಾಸಕಿ ಶ್ರೀಮತಿ ಚೈತ್ರ ಕೆ. ಕಾರ್ಯಕ್ರಮ ನಿರೂಪಿಸಿದರು. ಕಚೇರಿ ಸಹಾಯಕರಾದ ಶ್ರೀ ಶಾಂತಪ್ಪ ಸ್ವಾಗತಿಸಿದರು. ಹಿರಿಯ ಕಚೇರಿ ಸಹಾಯಕರಾದ ಶ್ರೀ ರವಿ ವಂದಿಸಿದರು.

Leave a Reply

Your email address will not be published. Required fields are marked *