ಉಡುಪಿ ಗೃಹ ನಿರ್ಮಾಣ ಸಹಕಾರಿ ಸಂಘದ 2025-26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಭಾಸ್ಕರ ಬಿ. ಕಾಮತ್ ಅವರ ಅಧ್ಯಕ್ಷತೆಯಲ್ಲಿ ಉಡುಪಿ ಮಿಷನ್ ಕಂಪೌಂಡುನಲ್ಲಿರುವ ಜಗನ್ನಾಥ ಸಭಾ ಭವನದಲ್ಲಿ ದಿನಾಂಕ 22-09-2026 ಮಂಗಳವಾರದಂದು ನಡೆಯಿತು. ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾರ್ಥಿ ಸಹಾಯ ಧನ ವಿತರಣೆ ಮಾಡಲಾಯಿತು. ಸಂಘದ ವಾರ್ಷಿಕ ವ್ಯವಹಾರವನ್ನು 100 ಕೋಟಿಗೆ ಹೆಚ್ಚಿಸಲು ಹಾಗೂ ಸಂಘದ ಕಾರ್ಯವ್ಯಾಪ್ತಿಯಲ್ಲಿ ಲಭ್ಯತೆಗನುಸಾರವಾಗಿ ಜಮೀನು ಖರೀದಿಸಿ ಅಭಿವೃದ್ಧಿಪಡಿಸಿ ಸದಸ್ಯರಿಗೆ ಹಂಚಲು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಭಾಸ್ಕರ ಬಿ. ಕಾಮತ್ ರವರು ಮಹಾಸಭೆಯಲ್ಲಿ ತಿಳಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಎಲ್. ಉಮಾನಾಥ್ ಹಾಗೂ ನಿರ್ದೆಶಕರುಗಳಾದ ಇಂದು ರಮಾನಂದ ಭಟ್, ಬಿ. ಜಯಕರ ಶೆಟ್ಟಿ ಇಂದ್ರಾಳಿ, ಶ್ರೀ ರಾಧಾಕೃಷ್ಣ ಶೆಣೈ, ಶ್ರೀ ಸಂಜೀವ ಕಾಂಚನ್ ಶ್ರೀ. ವಿಶ್ವನಾಥ ಬಾಯರಿ, ಶ್ರೀ ದಿನೇಶ್ ಕಿಣಿ, ಶ್ರೀ. ದಾಮೋದರ ಎಂ. ಶೆಟ್ಟಿ, ಶ್ರೀ ದೇವದಾಸ್ ಯು.,ಶ್ರೀಮತಿ ಸುಜಾತ ಸಿಮ್‌ನ್ ಪ್ರಭು, ಶ್ರೀಮತಿ ರಂಜನಾ ಎಸ್ ಶೆಟ್ಟಿ ಹಾಗೂ ಶ್ರೀ ಗೋಪಾಲ ನಾಯ್ಕ ಉಪಸ್ಥಿತರಿದ್ದರು. ಸಂಘದ ವ್ಯವಸ್ಥಾಪಕರಾದ ಅಶೋಕ್ ಭಟ್. ಮಾರ್ಪಳ್ಳಿ ಸಂಘದ ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷರಾದ ಎಲ್. ಉಮಾನಾಥ್ ಇವರು ಧನ್ಯವಾದಗೈದರು.

