×
Our website is made possible by displaying online advertisements to our visitors. Please consider supporting us by whitelisting our website.
  • 9880645340

ದಂಡತೀರ್ಥ :ಮುದ್ದು ಕೃಷ್ಣ, ಮುದ್ದು ರಾಧೆ ಸ್ಪರ್ಧೆ ಉದ್ಘಾಟನೆ, ಬಹುಮಾನ ವಿತರಣೆ

ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯ ಕಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಮುದ್ದು ಕೃಷ್ಣ ಮತ್ತು ಮುದ್ದು ರಾಧೆ ಸ್ಪರ್ಧೆ ಯನ್ನು ಆಯೋಜಿಸಲಾಯಿತು
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲೆಯ ರಕ್ಷಕ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷೆ ಶ್ರೀಮತಿ ಸುಜಯ ಪಿ. ಶೆಟ್ಟಿ ಮಾತನಾಡಿ ಮುದ್ದು ಮಕ್ಕಳಿಗೆ ಇಂತಹ ಅವಕಾಶಗಳು ಶಾಲೆಯಲ್ಲಿ ಸಿಕ್ಕಿದಾಗ ಅವರ ಪ್ರತಿಭೆ ವ್ಯಕ್ತವಾಗುತದೆ ಮತ್ತು ನಮ್ಮ ಸಂಸ್ಕೃತಿಯ ಅರಿವು ಮಕ್ಕಳಿಗೆ ಆಗಲು ಸಾಧ್ಯವಾಗುತ್ತದೆ. ಈ ಸುಂದರ ಕಾರ್ಯಕ್ರಮವನ್ನು ಸಂಘಟಸಲು ಪ್ರೋತ್ಸಾಹಿಸಿದ ಸಂಚಾಲಕರಾದ ಡಾ. ಪ್ರಶಾಂತ್ ಶೆಟ್ಟಿಯವರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ನೀಲನಂದ ನಾಯ್ಕ್ ಅಧ್ಯಕ್ಷತೆಯನ್ನು ವಹಿಸಿದ್ದರು , ಮುಖ್ಯ ಶಿಕ್ಷಕ ಶ್ರೀ ಗೇಬ್ರಿಯೆಲ್ ಮಸ್ಕೇರೆನ್ಹಸ್, ಕೆಜಿ ವಿಭಾಗ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ರಾಜಲಕ್ಷ್ಮಿ, ಉಪಸ್ಥಿತರಿದ್ದರು
ಸಂಸ್ಥೆಯ ಸಂಚಾಲಕರಾದ ಡಾ. ಪ್ರಶಾಂತ್ ಶೆಟ್ಟಿಯವರು ವಿಜೇತರಿಗೆ ಬಹುಮಾನ ವಿತರಿಸಿ, ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜುಳಾ ಆರ್ ಶೆಟ್ಟಿ,ಶ್ರೀಮತಿ ಪ್ರತಿಮಾ ಶೆಟ್ಟಿ, ಶಿಕ್ಷಕಿಯರು . ಉಪಸ್ಥಿತರಿದ್ದರು.
ಶ್ರೀಮತಿ ರೀಮಾ ನವೀನ್ ಸ್ವಾಗತಿಸಿ, ಶ್ರೀಮತಿ ರಜನಿ ಪ್ರಭು ವಂದಿಸಿದ ಈ ಕಾರ್ಯಕ್ರಮವನ್ನು ಶ್ರೀಮತಿ
ಝಹೀದರವರು ನಿರೂಪಿಸಿದರು

Leave a Reply

Your email address will not be published. Required fields are marked *