ಶಿರ್ವದ ಸಾವುದ್ ಸಭಾಭವನ (Saud Sabha Bhavan) ದಲ್ಲಿ ಮೂರು ದಿನಗಳ ಕಾಲ ವಿಶಿಷ್ಟವಾದ “ಮಾನ್ಸೂನ್ ಆಹಾರ ಮತ್ತು ಸಸ್ಯಮೇಳ” ಆಯೋಜನೆಗೊಂಡಿದೆ. ಕರಾವಳಿಯ ಮಳೆಗಾಲದ ಸಾಂಪ್ರದಾಯಿಕ ಆಹಾರ ಸಂಸ್ಕೃತಿ ಮತ್ತು ಕೃಷಿ ಪ್ರೀತಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವಿವಿಧ ನಮೂನೆಯ ದೋಸೆ, ಹತ್ತಾರು ಹಲಸಿನ ಹಣ್ಣಿನಿಂದ ತಯಾರಿಸುವ ಖಾದ್ಯಗಳು, ಮಳೆಗಾಲದ ವಿಶೇಷ ತಿನಿಸಿಗಳು, ಸ್ಥಳದಲ್ಲೇ ತಯಾರಿಸಿ ಕೊಡುವ ಹತ್ತಾರು ಲೈವ್ ಫುಡ್ ಗಳು, ಹಲವು ಸಾವಯವ ವಸ್ತುಗಳು, ಹಾಗೂ ಕರಕುಶಲ ವಸ್ತುಗಳು, ಫ್ಯಾನ್ಸಿ ವಸ್ತುಗಳು, ಗೃಹೋಪಯೋಗಿ
ಸಾಮಗ್ರಿಗಳು, ಹಾಗೂ ಇತರೆ ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಸ್ಥಳೀಯ ಉದ್ಯಮಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ಪರಿಚಯಿಸಿ ವ್ಯಾಪಾರ ವಿಸ್ತರಿಸಿಕೊಳ್ಳಲು ಉತ್ತಮ ವೇದಿಕೆ ಇದಾಗಿದೆ. ಆ ಮೂಲಕ ಸ್ಥಳೀಯ ರೈತರಿಗೆ ಪ್ರೋತ್ಸಾಹ, ಸಾವಯವ ವಸ್ತುಗಳ ಸದ್ಬಳಕೆ ಹೆಚ್ಚಿಸಲು, ಮತ್ತು ಆರೋಗ್ಯಕರ ಸ್ವದೇಶಿ ಆಹಾರ ವಸ್ತುಗಳು ಹಾಗೆಯೇ ಸಾವಯವ ವಸ್ತುಗಳಿಗೆ ಹೆಚ್ಚಿನ ಆದ್ಯತೆ ನೀಡಿ ಪ್ರಚಾರ ಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಳೆಗಾಲದಲ್ಲಿ ಕರಾವಳಿಗರ ಆರೋಗ್ಯಕರ ಆಹಾರ ಪದ್ಧತಿಯನ್ನು ಹೊಸ ಪೀಳಿಗೆಗೆ ಪರಿಚಯಿಸಲು ಮತ್ತು ಪರಿಸರ ಸ್ನೇಹಿ ಗಿಡಗಳ ಬೆಳೆಸುವಿಕೆಗೆ ಉತ್ತೇಜನ ನೀಡಲು ಈ ಮೇಳ ಸೂಕ್ತ ವೇದಿಕೆಯಾಗಿದೆ.

