×
Our website is made possible by displaying online advertisements to our visitors. Please consider supporting us by whitelisting our website.
  • 9880645340

S.R. ಪ್ರೀಮಿಯರ್ ಲೀಗ್: ರೋಲೆಕ್ಸ್ ಎಫ್‌ಸಿ ಕಣ್ಣಂಗಾರ್ ಚಾಂಪಿಯನ್

ಹೆಜಮಾಡಿ, ಆ.15: S.R. ಫ್ರೆಂಡ್ಸ್ ವತಿಯಿಂದ ಹೆಜಮಾಡಿ ಮೈದಾನದಲ್ಲಿ ಆಯೋಜಿಸಲಾಗಿದ್ದ S.R. ಪ್ರೀಮಿಯರ್ ಲೀಗ್ ಸೀಸನ್–2, 6ಎಸ್ ಫುಟ್ಬಾಲ್ ಟೂರ್ನಿಯ ರೋಚಕ ಪಂದ್ಯಾವಳಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಫೈನಲ್ ಪಂದ್ಯದಲ್ಲಿ ರೋಲೆಕ್ಸ್ FC ಕಣ್ಣಂಗಾರ್ ತಂಡವು ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರೆ, SFC ಹೆಜಮಾಡಿ ತಂಡವು ರನ್ನರ್‌ಅಪ್ ಸ್ಥಾನ ಪಡೆದುಕೊಂಡಿತು.

ಪಂದ್ಯಾವಳಿಯ ಬಳಿಕ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಭೋದ್ ಚಂದ್ರ ಹೆಜಮಾಡಿ ಹಾಗೂ ಹೆಜಮಾಡಿ ಹಿಂದುಳಿದ ವರ್ಗಗಳ ಕಾಂಗ್ರೆಸ್ ಅಧ್ಯಕ್ಷ ವಿಶಾಲ್ ವಿ. ಬಂಗೇರ ಅವರು ವಿಜೇತ ಹಾಗೂ ರನ್ನರ್‌ಅಪ್ ತಂಡಗಳಿಗೆ ಟ್ರೋಫಿ ಹಾಗೂ ಬಹುಮಾನಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಭೋದ್ ಚಂದ್ರ ಹೆಜಮಾಡಿ ಅವರು, ಯುವಜನರಲ್ಲಿ ಕ್ರೀಡಾಸಕ್ತಿ ಬೆಳೆಸುವ ಮೂಲಕ ಉತ್ತಮ ಆರೋಗ್ಯ, ಶಿಸ್ತು, ಸ್ನೇಹ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ. ಯುವಕರು ಕ್ರೀಡೆಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜದ ಉತ್ತಮ ಶಕ್ತಿಯಾಗಿ ರೂಪುಗೊಳ್ಳಬೇಕು ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ S.R. ಫ್ರೆಂಡ್ಸ್‌ನ ಕೋಚ್ ಹಾಗೂ ಮ್ಯಾನೇಜರ್ ಸಾಹುಲ್ ಹಮೀದ್, ಹಸನಬ್ಬ, ಫಾರೂಕ್, ಇಂತಿಯಾಝ್ ಸೇರಿದಂತೆ ಸಂಘಟಕರು, ಕ್ರೀಡಾಪ್ರೇಮಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಟೂರ್ನಿಯಲ್ಲಿ ವಿವಿಧ ತಂಡಗಳು ಉತ್ಸಾಹದಿಂದ ಭಾಗವಹಿಸಿದ್ದು, ಪಂದ್ಯಗಳು ಕ್ರೀಡಾಭಿಮಾನಿಗಳ ಗಮನ ಸೆಳೆಯುವಂತೆ ರೋಚಕವಾಗಿ ನಡೆದವು. ಉತ್ತಮ ಸಂಘಟನೆ ಹಾಗೂ ಕ್ರೀಡಾಸ್ಫೂರ್ತಿಯೊಂದಿಗೆ ನಡೆದ ಪಂದ್ಯಾವಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

Leave a Reply

Your email address will not be published. Required fields are marked *