ದ.ಕ. ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ, ಇದರ ನೇತೃತ್ವದಲ್ಲಿ ಹಾಗೂ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಹೃದಯ ಭಕ್ತಾಭಿಮಾನಿಗಳ ಸಹಕಾರ-ಸಹಯೋಗದೊಂದಿಗೆ ಕಳೆದ 4 ವರ್ಷಗಳಲ್ಲಿ ಯಶಸ್ವಿಯಾಗಿ ನಡೆದ “ಉಡುಪಿ ಉಚ್ಚಿಲ ದಸರಾ” ವಿಶ್ವದಾದ್ಯಂತ ಖ್ಯಾತಿ ಪಡೆದಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ.
ಈ ಬಾರಿ ಪಂಚಮ ವರ್ಷದ “ಉಡುಪಿ ಉಚ್ಚಿಲ ದಸರಾ – 2026” ಉತ್ಸವವು 11-10-2026 ರಿಂದ 21-10-2026 ರವರೆಗೆ ಒಟ್ಟು 11 ದಿನಗಳಲ್ಲಿ ನಡೆಯಲಿದ್ದು, ಉತ್ಸವದ ರೂಪುರೇಷೆಗಳು, ಕಾರ್ಯಕ್ರಮಗಳು ಹಾಗೂ ಇನ್ನಿತರ ವ್ಯವಸ್ಥಾಪನಾ ವಿಷಯಗಳ ಕುರಿತು ಚರ್ಚಿಸಲು 08-08-2026, ಶನಿವಾರ, ಅಪರಾಹ್ನ ಗಂಟೆ 3.30 ಕ್ಕೆ ಉಚ್ಚಿಲದ ಮೊಗವೀರ ಭವನದಲ್ಲಿ “ಪೂರ್ವಭಾವಿ ಸಭೆ”ಆಯೋಜಿಸಲಾಗಿದೆ.
ಆದ್ದರಿಂದ ಎಲ್ಲಾ ಸಹೃದಯಿ ಭಕ್ತರು, ಸಮಿತಿಯ ಸರ್ವ ಸದಸ್ಯರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಮೀನುಗಾರಿಕಾ ಸಂಘಟನೆಗಳು, ಮಹಿಳಾ ಸಂಘಟನೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸದರಿ ಸಭೆಯಲ್ಲಿ ಭಾಗವಹಿಸಿ, “ಉಡುಪಿ ಉಚ್ಚಿಲ ದಸರಾ – 2026” ಉತ್ಸವವನ್ನು ಇನ್ನಷ್ಟು ಶಿಸ್ತುಬದ್ಧವಾಗಿ, ವೈಭವಯುತವಾಗಿ ಹಾಗೂ ಆಕರ್ಷಕವಾಗಿ ಆಚರಿಸಲು ಸಲುವಾಗಿ ಪ್ರಕಟಣೆಯಲ್ಲಿ ತಿಳಿಸಿದೆ

