×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಆನಂದತೀರ್ಥ ಪ್ರಾಂಶುಪಾಲರಿಂದ ಜಲ ಸಂರಕ್ಷಣೆಯ ಆದರ್ಶ ಹಜ್ಜೆ

ಬಂಟಕಲ್ ದುರ್ಗಾನಗರದಲ್ಲಿರುವ ತಮ್ಮ ಹೊಸ ಮನೆಯನ್ನು ನಿರ್ಮಿಸುವ ಸಂದರ್ಭದಲ್ಲಿ, ನಿವೇಶನದಲ್ಲಿ ತೆರೆದ ಬಾವಿಗೆ ನೀರಿನ ಮೂಲವಿಲ್ಲದ ಕಾರಣ ಒಂದು ಕೊಳವೆ ಬಾವಿಯನ್ನು ಕೊರೆಸಿದ್ದರು. ಆರಂಭದಲ್ಲಿ ಮನೆಯ ಬಳಕೆಗೆ ಸಾಕಾಗುವಷ್ಟು ನೀರು ದೊರೆಯುತ್ತಿದ್ದರೂ, ಭವಿಷ್ಯದ ನೀರಿನ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಜಲ ಮರುಪೂರಣ ವ್ಯವಸ್ಥೆಯನ್ನು ಅಳವಡಿಸುವ ನಿರ್ಧಾರ ಕೈಗೊಂಡರು.

*ಜಲ ಮರುಪೂರಣ ತಜ್ಞ ಹಾಗೂ ರಾಜ್ಯ ತರಬೇತುದಾರರಾದ ಶ್ರೀ ಜೋಸೆಫ್ ಜಿ.ಎಂ. ರೆಬೆಲ್ಲೊ (ಮೊ. 9964100520)* ಅವರ ಮಾರ್ಗದರ್ಶನದಲ್ಲಿ, ಮನೆಯ ತಾರಸಿಯ ಮೇಲೆ ಬೀಳುವ ಮಳೆನೀರನ್ನು ವೈಜ್ಞಾನಿಕವಾಗಿ ಶೋಧಿಸಿ ನೇರವಾಗಿ ಕೊಳವೆ ಬಾವಿಗೆ ಜಲ ಮರುಪೂರಣ ಮಾಡುವ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಳವಡಿಸಲಾಯಿತು.

ಈ ಯೋಜನೆಯ ಫಲವಾಗಿ ಕೇವಲ ಒಂದು ಮಳೆಗಾಲದ ನಂತರವೇ ಕೊಳವೆ ಬಾವಿಯ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಳಗೊಂಡಿದ್ದು, ಈಗ ವರ್ಷಪೂರ್ತಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿದೆ. ಈ ವ್ಯವಸ್ಥೆಯಿಂದ ಮಳೆನೀರು ಚರಂಡಿ, ಹಳ್ಳ, ನದಿ ಅಥವಾ ಸಮುದ್ರ ಸೇರುವ ಬದಲು ನೇರವಾಗಿ ಭೂಗರ್ಭಕ್ಕೆ ಸೇರಿ ಅಂತರ್ಜಲ ವೃದ್ಧಿಗೆ ಕಾರಣವಾಗುತ್ತಿದೆ.

ಇಂದು ನೀರಿನ ಕೊರತೆ ದೇಶದ ಪ್ರಮುಖ ಸವಾಲಾಗಿರುವ ಸಂದರ್ಭದಲ್ಲಿ, ಶ್ರೀ ವಿಜಯ್ ಪಿ. ರಾವ್ ದಂಪತಿಯ ಈ ಕಾರ್ಯವು ಪ್ರತಿಯೊಬ್ಬ ನಾಗರಿಕರಿಗೆ ಸ್ಪೂರ್ತಿದಾಯಕವಾಗಿದೆ.

ವಿಶೇಷವಾಗಿ ಶಿಕ್ಷಕರು, ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇಂತಹ ಮಾದರಿಗಳನ್ನು ತಮ್ಮ ಮನೆ ಮತ್ತು ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ನೀರಿನ ಸಂರಕ್ಷಣೆಗೆ ಕೈಜೋಡಿಸಬೇಕು.
ಪಾಠ ಮತ್ತು ಭಾಷಣಗಳಿಗಿಂತ ಕಾರ್ಯವೇ ಶ್ರೇಷ್ಠ. ಪರಿಸರ ಸಂರಕ್ಷಣೆ ಮತ್ತು ಜಲ ಭದ್ರತೆಯ ಕುರಿತಾಗಿ ಶ್ರೀ ವಿಜಯ್ ಪಿ. ರಾವ್ ದಂಪತಿಯ ಈ ಕಾರ್ಯ ನಿಜಕ್ಕೂ ಅನುಕರಣೀಯ ಮತ್ತು ಶ್ಲಾಘನೀಯವಾಗಿದೆ.

“ಪ್ರತಿ ಮನೆಯಲ್ಲೂ ಮಳೆನೀರು ಕೊಯ್ಲು – ಪ್ರತಿ ಕೊಳವೆ ಬಾವಿಗೆ ಜಲ ಮರುಪೂರಣ; ಇದೇ ಮುಂದಿನ ಪೀಳಿಗೆಗೆ ನೀರಿನ ಭದ್ರತೆಯ ಭರವಸೆ.”

Leave a Reply

Your email address will not be published. Required fields are marked *