ಪಡುಬಿದ್ರಿ ಪರಿಸರದಲ್ಲಿ ಕುಡಿಯುವ ನೀರಿನ ಅಗತ್ಯತೆಯನ್ನು ಮನಗಂಡ ಎಂ 11 ಎನರ್ಜಿ ಸಂಸ್ಥೆಯು ಅತ್ಯಾಧುನಿಕ ತಂತ್ರಜ್ಞಾನದ ನೀರಿನ ಸಂಸ್ಕರಣಾ ಘಟಕವನ್ನು CSR ಯೋಜನೆಯಡಿಯಲ್ಲಿ ಪಡುಬಿದ್ರಿ–ಕಾರ್ಕಳ ಬಸ್ ನಿಲ್ದಾಣದಲ್ಲಿ ಇಂದು ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಕಾಪು ತಹಸಿಲ್ದಾರ್ ಅನಂತ ಕುಮಾರ್ ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು ಎಂ 11
ಸಂಸ್ಥೆಯ CSR ಚಟುವಟಿಕೆಗಳನ್ನು ಶ್ಲಾಘಿಸಿ, ಸಾರ್ವಜನಿಕ ಉಪಯೋಗಕ್ಕಾಗಿ ಈ ಅಮೂಲ್ಯ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಭವಿಷ್ಯದಲ್ಲಿಯೂ ಸಂಸ್ಥೆಯು ನಡೆಸುವಂತಹ CSR ಯೋಜನೆಗಳಿಗೆ ತಮ್ಮ ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪಡುಬಿದ್ರಿ ಪೋಲೀಸ್ ಠಾಣಾಧಿಕಾರಿ ಶಕ್ತಿವೇಲು, ಪಡುಬಿದ್ರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು
. ಈ ಸಂದರ್ಭದಲ್ಲಿ ಆಟೋ ಟೆಂಪೋ ಸ್ಟ್ಯಾಂಡ್ ಅಧ್ಯಕ್ಷರಾದ ದಿನೇಶ್, ಎಂ 11 ಸಂಸ್ಥೆಯ ಎಚ್ ಆರ್ ಮುಖ್ಯಸ್ಥ ಅನಿಲ್ ಪಾಲನ್, ಟರ್ಮಿನಲ್ ಮುಖ್ಯಸ್ಥ ಮಧು ಎಸ್ ರೈ, ಉತ್ಪಾದನಾ ಮುಖ್ಯಸ್ಥ ಶ್ರೀ ಮುರ್ತುಜಾ ಖಾನ್, ಪ್ರಾಜೆಕ್ಟ್ ಮ್ಯಾನೇಜರ್ ರಜತ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಅನಿಲ್ ಪಾಲನ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು

