ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ ರಿ, ಬಾಗಲಕೋಟೆ ಇವರು ಆಯೋಜಿಸಿದ, ರಾಷ್ಟ್ರೀಯ ಚಿತ್ರಕಲಾ ಸಮ್ಮೇಳನ ಬೆಂಗಳೂರು 2026 ರ ಅಂಗವಾಗಿ ಡಾ ಆರ್.ಎಂ ಹಡಪದ್ ರಾಷ್ಟ್ರೀಯ ಪ್ರಶಸ್ತಿ ಕುಂದಾಪುರ ತಾಲೂಕಿನ, ಶ್ರೀ ಮತಿ ಇಂದಿರಾ ಗಾಂಧಿ ವಸತಿ ಶಾಲೆ ಸಿದ್ದಾಪುರ,ಇಲ್ಲಿನ ಚಿತ್ರಕಲಾ ಶಿಕ್ಷಕ ರಾಜೇಂದ್ರ ಪೂಜಾರಿ, ತ್ರಾಸಿಯವರಿಗೆ ಲಭಿಸಿದೆ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೇದಿಕೆ ಯಲ್ಲಿ ಕನ್ನಡ ವಿಶ್ವ ವಿದ್ಯಾಲಯದ ದೃಶ್ಯಕಲಾ ವಿಭಾಗದ ಮುಖ್ಯಸ್ಥರಾದ ಡಾ . ಮೋಹನ್ ರಾವ್ ಪಾಂಚಾಲ, ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎಸ್. ಸಿ ಪಾಟೀಲ್ , ಹಾಗೂ ವಿಶ್ರಾಂತ ವಿಶೇಷಾಧಿಕಾರಿಗಳು ಕರ್ನಾಟಕ ಲಲಿತ ಕಲಾ ವಿಶ್ವವಿದ್ಯಾಲಯ ಬಾದಾಮಿ, ಇಳಕಲ್ ವಿಜಯ್ ಮಹಾಂತೇಶ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಬಸವರಾಜ್ ಗವಿ ಮಠ ಹಾಗೂ ರಮೇಶ್ ಕಮತಗಿ ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ ರಿ ಬಾಗಲಕೋಟೆ, ಸಾಹಿತಿ ಎಂ ವಿ ಷಡಕ್ಷರಿ ಹಾಗೂ ಇತರ ಗಣ್ಯರು ಇವರಲ್ಲರುವೆಡಿಕೆಯಲ್ಲಿ ಉಪಸ್ಥಿತರಿದ್ದು ಪ್ರಶಸ್ತಿ ಪ್ರದಾನ ಮಾಡಿದರು…
ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಒಟ್ಟು 19 ಮಂದಿ ಸಾಧಕರನ್ನು ಈ ವೇದಿಕೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು….


