×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬ್ರಹ್ಮಾವರ: ರುಡ್ ಸೆಟ್ ಸಂಸ್ಥೆ ಇವರ ಆಶ್ರಯದಲ್ಲಿ ಆಯೋಜಿಸಲಾದ ಬ್ಯೂಟಿ ಪಾರ್ಲರ್ ತರಬೇತಿಯ ಸಮಾರೋಪ ಸಮಾರಂಭ

ರುಡ್ ಸೆಟ್ ಸಂಸ್ಥೆ ಇವರ ಆಶ್ರಯದಲ್ಲಿ ಆಯೋಜಿಸಲಾದ ಬ್ಯೂಟಿ ಪಾರ್ಲರ್ ತರಬೇತಿಯ ಸಮಾರೋಪ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನೆರವೇರಿತು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀಮತಿ. ಮೀರಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಚಾಂತಾರು ಪಂಚಾಯತ್ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ತಮ್ಮನ್ನು ತಾವು ಅಂದವಾಗಿ ಕಾಣುವಂತೆ ಶ್ರಮವಹಿಸುವಂತೆ ಇತರರ ಸೌಂದರ್ಯ ವೃದ್ಧಿಸುವಲ್ಲಿಯೂ ಸಮಾನ ಕಾಳಜಿ ವಹಿಸಬೇಕು ಎಂದು ತಿಳಿಸಿದರು. ಬಹಿರಂಗ ಶುದ್ಧಿಯ ಜೊತೆಗೆ ಅಂತರಂಗ ಶುದ್ಧಿಯೂ ಇದ್ದಾಗ ಮಾತ್ರ ಉತ್ತಮ ಸೇವೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದರು. ಮಹಿಳೆಯರ ಅಚ್ಚುಮೆಚ್ಚಿನ ಕ್ಷೇತ್ರಗಳಲ್ಲಿ ಸೌಂದರ್ಯ ವೃದ್ಧಿಯ ಕೆಲಸವೂ ಒಂದಾಗಿದ್ದು, ಪಡೆದಿರುವ ಉತ್ತಮ ತರಬೇತಿಯನ್ನು ಸದ್ಬಳಕೆ ಮಾಡಿಕೊಂಡು ಸ್ವಾಭಿಮಾನಿ ಮಹಿಳೆಯರಾಗಿ ಉತ್ತಮ ಸಮಾಜ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು ಎಂದು, ಟೂಲ್ ಕಿಟ್ ಹಾಗೂ ಪ್ರಮಾಣ ಪತ್ರವನ್ನು ವಿತರಿಸಿ, ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಬೊಮ್ಮಯ್ಯ ಎಂ ಅವರು ಮಾತನಾಡಿ, 35 ದಿನಗಳ ತರಬೇತಿ ನಿಜವಾದ ಅರ್ಥದಲ್ಲಿ ಯಶಸ್ವಿಯಾಗುವುದು ನೀವು ಸ್ವಂತ ಉದ್ಯಮ ಆರಂಭಿಸಿ ಯಶಸ್ಸು ಸಾಧಿಸಿದಾಗ ಮಾತ್ರ ಎಂದು ಹೇಳಿದರು. ಸಂಸ್ಥೆಗೆ ನೀವು ನೀಡುವ ಅತಿ ದೊಡ್ಡ ಕೊಡುಗೆ ನಿಮ್ಮ ಯಶಸ್ಸೇ ಆಗಿದ್ದು, ಯಾವುದೇ ಸಲಹೆ ಅಥವಾ ಮಾರ್ಗದರ್ಶನ ಬೇಕಾದರೂ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದರು. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ನೀಡಿರುವ ತರಬೇತಿಯ ಸದ್ಬಳಕೆ ನಿಮ್ಮ ಕೈಯಲ್ಲಿದೆ. ತರಬೇತಿ ಅವಧಿಯಲ್ಲಿ ಪಾಲಿಸಿದ್ದ ಶಿಸ್ತನ್ನು ಜೀವನದುದ್ದಕ್ಕೂ ಮುಂದುವರಿಸಿಕೊಂಡು ಹೋದರೆ ಉತ್ತಮ ಭವಿಷ್ಯ ನಿಮ್ಮದಾಗುತ್ತದೆ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಶ್ರೀಮತಿ. ಹರಿಣಿ ಅಜಯ್ ರಾವ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಕುಮಾರಿ. ಮಹಾದೇವಿ, ಶ್ರೀಮತಿ. ಅಕ್ಷತಾ ವಿ.ಎ., ಕುಮಾರಿ. ಕಾಳಮ್ಮ ಹಾಗೂ ಶ್ರೀಮತಿ. ಸುಕನ್ಯಾ ಅವರು ತರಬೇತಿಯ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮವನ್ನು ಉಪನ್ಯಾಸಕರಾದ ಶ್ರೀಮತಿ. ಚೈತ್ರ ಕೆ ನಿರೂಪಿಸಿದರು. ಶ್ರೀಮತಿ. ಆಶಾ ಪ್ರಾರ್ಥನೆ ನೆರವೇರಿಸಿದರು. ಕಚೇರಿ ಸಹಾಯಕರಾದ ಶ್ರೀ. ಶಾಂತಪ್ಪ ಸ್ವಾಗತಿಸಿದರು. ಹಿರಿಯ ಕಚೇರಿ ಸಹಾಯಕರಾದ ಶ್ರೀ. ರವಿ ವಂದಿಸಿದರು.

Leave a Reply

Your email address will not be published. Required fields are marked *