×
Our website is made possible by displaying online advertisements to our visitors. Please consider supporting us by whitelisting our website.
  • 9880645340

ನಾದಶ್ರೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನೂತನ ಸ್ವಂತ ಕಟ್ಟಡ ಶ್ರೀ ಲಕ್ಷ್ಮೀ ಲೋಕಾರ್ಪಣೆ

ಉಡುಪಿ, ಎ. 12: ಕುಕ್ಕಿಕಟ್ಟೆ ನಾದಶ್ರೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಸ್ವಂತ ಕಟ್ಟಡ ‘ಶ್ರೀ ಲಕ್ಷ್ಮೀ ಉದ್ಘಾಟನೆಯನ್ನು ಕುವೆಂಪು ವಿ.ವಿ. ವಿಶ್ರಾಂತ ಕುಲಪತಿ ಪ್ರೊ| ಬಿ.ಎಸ್. ಶೇರಿಗಾರ್ ರವಿವಾರ ನೆರವೇರಿಸಿದರು.

ಬಳಿಕ ಮಾತನಾಡಿ, ಸ್ವ ಸಹಾಯ, ಸ್ವ ಜವಾಬ್ದಾರಿ, ಪಾರ ದರ್ಶಕತೆ, ಸಮಾನತೆ, ನ್ಯಾಯ, ಏಕತೆ ಗಮನದಲ್ಲಿ ಇಟ್ಟು ಕೊಂಡು ಸಹಕಾರಿ ಸಂಸ್ಥೆ ನಡೆಸಿದರೆ, ಸಮಾಜದಲ್ಲಿ ಸಹಕಾರಿ ಜೀವನ ಶೈಲಿ ಹೆಚ್ಚು ಪ್ರಚಲಿತ, ಪ್ರಸ್ತುತ ಆಗಲಿದೆ ಎಂದರು.

ಭದ್ರತ ಕೊಠಡಿ ಉದ್ಘಾಟಿಸಿದ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ನಾದಶ್ರೀ ಕ್ರೆಡಿಟ್ ಕೋ-ಆಪ್ 13 ವರ್ಷದ ಕಡಿಮೆ ಅವಧಿಯಲ್ಲಿ ದೊಡ್ಡ ಕಾರ್ಯ ಮಾಡಿ, ಜನರ ಮನಸ್ಸು ಗೆದ್ದಿದೆ ಎಂದರು.

ಸಂಸ್ಥೆಯ ಆಡಳಿತ ಕಚೇರಿ ಕೊಠಡಿ ಉದ್ಘಾಟಿಸಿದ ಸಹಕಾರ ರತ್ನ ಇಂದ್ರಾಳಿ ಜಯಕರ್ ಶೆಟ್ಟಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಜಿಲ್ಲೆಯ ಜನರು 5 ಸಾವಿರ ಕೋಟಿ ರೂಪಾಯಿಗೂ ಅಧಿಕ ಠೇವಣಿ ಇಟ್ಟಿದ್ದಾರೆ. ಸಹಕಾರಿ ಸಂಸ್ಥೆಗಳು ಲಾಭಾಂಶದ ಶೇ. 1ರಷ್ಟನ್ನು ಶೈಕ್ಷಣಿಕ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಬೇಕು ಎಂದರು

ಸೊಸೈಟಿ ಅಧ್ಯಕ್ಷ ಲಚ್ಚೇಂದ್ರ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಕೊರಂಗ್ರಪಾಡಿ ವ್ಯ. ಸೇ. ಸ. ಸಂಘದ ಅಧ್ಯಕ್ಷ ಶ್ರೀಧರ ದೇವಾಡಿಗ, ಹಳೆಯಂಗಡಿ ಪ್ರಿಯ ದರ್ಶಿನಿ ಕೋ-ಆಪ್. ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾರ್ಡ್, ಮಾಜಿ ಅಧ್ಯಕ್ಷರಾದ ಚಂದ್ರಕಾಂತ ದೇವಾಡಿಗ,ಯೂನಿಯನ್ ನಿರ್ದೇಶಕ ಹರೀಶ್ ಕಿಣಿ ಅಲೆವೂರು, ಜೀವರತ್ನ ದೇವಾಡಿಗ, ಆಡಳಿತ ಮಂಡಳಿಯ d ನಿರ್ದೇಶಕರಾದ ಹೇಮಂತ್ ಕುಮಾರ್, ನಾಗೇಶ್ ದೇವಾಡಿಗ, ಗೋಪಾಲ ಸೇರಿಗಾರ, ಕುಮಾರ ಸೇರಿಗಾರ, ಸುಧಾಕರ ಬಂಗೇರ, ರಮೇಶ್ ಶೆಟ್ಟಿ ಗೋವಿಂದ ನಾಯ್ಕ ಪ್ರದೀಪ್ ಕಾಮತ್, ಸುಧೀರ್‌ಚಿಟ್ಟಾಡಿ, ಅನುರಾಧಾ ಶ್ರೀಧರ ದೇವಾಡಿಗ, ಮೀರಾ ಉಮೇಶ್ ದೇವಾಡಿಗ, ಸುಮಾ ಅನಂತ ದೇವಾಡಿಗ ಉಪಸ್ಥಿತರಿದ್ದರು.

ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದವ ರನ್ನು ಗೌರವಿಸಲಾಯಿತು. ಸಿಇಒಕಾರ್ತಿಕ್ ಕುಮಾರ್‌ಸ್ವಾಗತಿ ಎ. ಸಂಸ್ಥೆ ಬೆಳೆದು ಬಂದ ಹಾದಿಯನ್ನು ವಿವರಿಸಿದರು. ವಿವರಿಸಿದರು. ಉಪಾಧ್ಯಕ್ಷ ಮನೋಹರ ದೇವಾಡಿಗ ವಂದಿಸಿ, ಸಚ್ಚೇಂದ್ರ ಅಂಬಾಗಿಲು ನಿರೂಪಿಸಿದರು.

Leave a Reply

Your email address will not be published. Required fields are marked *