×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ: ಅಡುಗೆ ಅನಿಲ ಕೊರತೆ ಬೆಲೆಯೇರಿಕೆ ವಿರುದ್ದ ಮಹಿಳೆಯರ ಪ್ರತಿಭಟನೆ

ಮೋದಿಯವರು ಅಧಿಕಾರಕ್ಕೆ ಬಂದ ತರುವಾಯ ದೇಶದ ಹೆಣ್ಣು ಮಕ್ಕಳ ಕಣ್ಣಲ್ಲಿ ನೀರು ಬರುವುದನ್ನು ತಪ್ಪಿಸಲು ಉಜ್ವಲ ಯೋಜನೆ ಮೂಲಕ ಸಬ್ಸಿಡಿ ಕಸಿದರು ಈಗ ಯುದ್ಧ ಕೋರ ಅಮೇರಿಕಾ ಬೆಂಬಲಿಸಿ ಮಹಿಳೆಯರ ಕಣ್ಣೀರು ಹಾಕುವಂತೆ ಮಾಡುತ್ತಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಸರೋಜಾ ಹೇಳಿದರು
ಕರೋನಾದಂತೆ 140 ಕೋಟಿ ಜನರನ್ನು ರಕ್ಷಿಸುತ್ತೇನೆ,ತೈಲ ಮತ್ತು ಅಡುಗೆ ಅನಿಲದ ಕೊರತೆ ಇಲ್ಲ ಎಂದು ಹೇಳಿದ ನಂತರ ಈಗಲೂ ಮನೆಗಳಲ್ಲಿ ಹೋಟೆಲ್ ಗಳಲ್ಲಿ ಅಡುಗೆ ಅನಿಲ ಸಿಗದೇ ಇರುವುದು ಅವರು ದೇಶದ ಜನರಿಗೆ ಸುಳ್ಳು ಹೇಳಿದ್ದಾರೆ ಅಲ್ಲದೇ ಇಂತಹ ಸಂಕಷ್ಟ ಸಮಯದಲ್ಲಿ ಅಡುಗೆ ಅನಿಲ ಬೆಲೆ ಏರಿಕೆ ಮಾಡಿರುವುದು ಇದು ಕೇಂದ್ರ ಸರ್ಕಾರದ ವೈಫಲ್ಯ ಎಂದು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಸರೋಜಾ ಅವರು ಹೇಳಿದರು.
ಅವರು ಉಡುಪಿ ಅಜ್ಜರಕಾಡು ವಿನಲ್ಲಿ ನಡೆದ ಗ್ಯಾಸ್ ಸಿಲಿಂಡರ್ ಕೊರತೆ ವಿರುದ್ಧ ಹಾಗೂ ಬೆಲೆಯೇರಿಕೆ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು ಯುದ್ಧ ವಿರೋಧಿ ಮಾತುಗಳನ್ನಾಡಿದರು. ಸಿಐಟಿಯು ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ, ಕೋಶಾಧಿಕಾರಿ ಕವಿರಾಜ್ ಎಸ್ ಕಾಂಚನ್ ಮಾತನಾಡಿದರು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೀಲಾವತಿ, ಬಲ್ಕೀಸ್, ಶಶಿಕಲಾ,ನಳಿನಿ, ಕೂಲಿಕಾರರ ಸಂಘಟನೆ ವೆಂಕಟೇಶ್ ಕೋಣಿ ಸಿಐಟಿಯು ಮುಖಂಡರಾದ ಉಮೇಶ್ ಕುಂದರ್, ಸುಭಾಶ್ಚಂದ್ರ ನಾಯಕ್,ರಾಮಕಾರ್ಕಡ ಇದ್ದರು.
ಒಲೆಯಲ್ಲಿ ಕಾಪಿ ಮಾಡಿ ಕುಡಿದು ಕೇಂದ್ರ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು

Leave a Reply

Your email address will not be published. Required fields are marked *