ಕಾಪು ವಿಧಾನಸಭಾ ಕ್ಷೇತ್ರದ ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 30 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆ ಹಾಗೂ ಉದ್ಘಾಟನೆಯನ್ನು ಇಂದು ದಿನಾಂಕ 22-03-2026 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.
ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತೂರು ಗ್ರಾಮದ ವಾದಿರಾಜ ಆಚಾರ್ಯ ಮನೆಯಿಂದ ಅಶ್ವತ್ಥಕಟ್ಟೆ ವರಗೆ ರಸ್ತೆ ಅಭಿವೃದ್ಧಿ – 10 ಲಕ್ಷ, ಪಿಲಾರು ಗ್ರಾಮ ತೆಂಕಿಲ ಜಾರುಬೊಟ್ಟು ರಸ್ತೆ ಕಾಂಕ್ರೀಟೀಕರಣ – 10 ಲಕ್ಷ ಸೇರಿದಂತೆ ಒಟ್ಟು 20 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಪಿಲಾರು ಗ್ರಾಮದ ತಂಬಿದಬೆಟ್ಟು ಜಾರಂದಾಯ ದೈವಸ್ಥಾನ ರಸ್ತೆ ಡಾಂಬರೀಕರಣ – 10 ಲಕ್ಷ ಇದರ ಉದ್ಘಾಟನೆಯನ್ನು ನೆರವೇರಿಸಲಾಯಿತು.*
ಈ ಸಂದರ್ಭದಲ್ಲಿ ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಮೋಹಿನಿ ಮಾಜಿ ಸದಸ್ಯರಾದ ರವೀಂದ್ರ ಪ್ರಭು, ಶಿವರಾಮ್ ಭಂಡಾರಿ, ಯಶೋಧ, ಸ್ಥಳೀಯರಾದ ಸುಧೀರ್ ರಾವ್, ವಿಶ್ವನಾಥ ಶೆಟ್ಟಿ, ಜಯರಾಮ್ ಶೆಟ್ಟಿ, ಮಿಥೇಶ್, ಹರಿದಾಸ್ ಪ್ರಭು, ಶೈಲೇಂದ್ರ ಶೆಟ್ಟಿ, ಅಶೋಕ್ ನಾಯಕ್, ಸತೀಶ್ ಆಚಾರ್ಯ, ಗಂಗಾಧರ ಶೆಟ್ಟಿ, ಭೋಜು ಹೆಗ್ಡೆ, ದೇವಿಪ್ರಸಾದ್ ಶೆಟ್ಟಿ, ಹರಿಣಾಕ್ಷ ಶೆಟ್ಟಿ, ನಾಗೇಶ್ ನಾಯಕ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

