ಉಡುಪಿ ಜಿಲ್ಲೆಯ ಶ್ರೀ ಕ್ಷೇತ್ರ ಶಂಕರಪುರ ಸುಮಾರು 11 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿರುವ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರು ಶ್ರೀ ಕ್ಷೇತ್ರ ಆವರಣದಲ್ಲಿ ಹಿಂದೂ ಬಾಂಧವರ ಒಗ್ಗಟ್ಟು ಮತ್ತು ಏಳಿಗೆಯ ಮಹಾ ಸಂಕಲ್ಪದಲ್ಲಿ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ 19 ಅಡಿ ಎತ್ತರದ ಏಕ ಶಿಲಾ ಶ್ರೀ ಮುಖ್ಯಪ್ರಾಣನ ಮೂರ್ತಿ ಸ್ಥಾಪನೆಯನ್ನು 2026 ಎಪ್ರಿಲ್ 02 ರಂದು ಮಾಡಲಿದ್ದು ಈ ಬಗ್ಗೆ ಮಾರ್ಚ್ 14 ರಂದು ಉಡುಪಿ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ತರಲಾಗುವುದು. ಮಾರ್ಚ್ 26ರಂದು ಹನುಮ ಜನ್ಮ ಭೂಮಿಯಿಂದ ರಾಮನವಮಿಯಂದು ಹನುಮ ಜ್ಯೋತಿ ಮತ್ತು ಹನುಮ ಧ್ವಜವು ಹೊರಟು ಮಾರ್ಚ್ 29ಕ್ಕೆ ಉಡುಪಿ ತಲುಪಲಿದೆ. ಉಡುಪಿ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆಯಿಂದ ಹನುಮ ಜ್ಯೋತಿ, ಹನುಮಧ್ವಜ ಹಾಗೂ ಅವಧೂತ ಭಗವಾನ್ ನಿತ್ಯಾನಂದ ಸ್ವಾಮಿಯ ೨೦೦ಕೆಜಿ ತೂಕದ ಪಂಚಲೋಹ ಮೂರ್ತಿಯು ಶ್ರೀ ಕ್ಷೇತ್ರಕ್ಕೆ ಬರಲಿದೆ. ಮಾರ್ಚ್ ೩೧ರಿಂದ ಎಪ್ರಿಲ್ ೦೨ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮೂರ್ತಿ ಸ್ಥಾಪನೆ ಹಾಗೂ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ ಪತ್ರಿಕಾಗೋಷ್ಠಿಯಲ್ಲಿ ಗೀತಾಂಜಲಿ ಎಂ. ಸುವರ್ಣ, ಅಭಿರಾಜ್ ১০. ಸುವರ್ಣ, ಸುನಿಲ್ ಕೆ.ಆರ್., ವಿಜಯ ಕೊಡವೂರು, ವೀಣಾ ಎಸ್. ಶೆಟ್ಟಿ, ಸತೀಶ್ ದೇವಾಡಿಗ, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

