×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕೃಷಿಯಿಂದ ಕೌಟುಂಬಿಕ ನೆಮ್ಮದಿ ಸಾಧ್ಯ: ಶ್ರೀ. ಗುರುರಾಜ್ ಮನುಗೊಳಿ,

ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಕೃಷಿ ಉದ್ಯಮಿ ತರಬೇತಿಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಶ್ರೀ. ಗುರುರಾಜ್ ಮನುಗೊಳಿ, ನಿವೃತ್ತ, ಉಪನಿರ್ದೇಶಕರು, ಪಶು ಇಲಾಖೆ, ಹಾಗೂ ಜಿಲ್ಲಾ ಸಂಯೋಜಕರು, ಪ್ರಾಣಿ ಅಂಬುಲೆನ್ಸ್ ಹುಬ್ಬಳ್ಳಿ

ಅವರು ಕೃಷಿ ಉದ್ಯಮಿ ತರಬೇತಿಯ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಮೊದಲಿಗೆ ಶಿಬಿರಾರ್ಥಿಗಳನ್ನು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದಕ್ಕಾಗಿ ಶುಭಾಶಯಗಳನ್ನು ತಿಳಿಸಿದರು. ಕೃಷಿ ಉದ್ಯಮಿ ಎಂದರೆ ಕೃಷಿ ಹಾಗೂ ಕೃಷಿ ಆಧಾರಿತ ಚಟುವಟಿಗಳಲ್ಲಿ ನವೀನ ತಂತ್ರಜ್ಞಾನ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಕೌಶಲ್ಯಗಳನ್ನು ಬಳಸಿ ಯಶಸ್ಸು ಗಳಿಸುವುದಾಗಿದೆ. ಕೃಷಿ ಉದ್ಯಮದಲ್ಲಿ ಸಮಗ್ರ ಕೃಷಿಕರಾಗುವವರಿಗೆ ಅತ್ಯುತ್ತಮವಾದ ಮಾಹಿತಿ ಇಲ್ಲಿ ದೊರೆಯುತ್ತದೆ. ಆಹಾರ ಸಂಸ್ಕರಣೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ, ಕೃಷಿ ಯಂತ್ರೋಪಕರಣಗಳನ್ನು ತೊಡಗಿಸಿಕೊಂಡು ಕೃಷಿಯಲ್ಲಿ ತೊಡಗಿಸಿಕೊಳ್ಳುವುದಾಗಿದೆ. ಸಾವಯವ ಕೃಷಿ ಬೆಳೆಗಾರರ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಇದೆ. ಹಾಗಾಗಿ ಮಾನಸಿಕ ನೆಮ್ಮದಿ, ಕೌಟುಂಬಿಕ ನೆಮ್ಮದಿ, ಒತ್ತಡಗಳ ನಿರ್ವಹಣೆ, ಆರ್ಥಿಕವಾಗಿ, ಸಾಮಾಜಿಕವಾಗಿರುವ ಉತ್ತಮ ಸ್ಥಾನಮಾನವನ್ನು ಕೃಷಿ ಆಧಾರಿತ ಚಟುವಟಿಗಳಿಂದ ಪಡೆದುಕೊಳ್ಳಬಹುದು. ಹಾಗಾಗಿ ತರಬೇತಿಯನ್ನು ಶ್ರದ್ಧೆಯಿಂದ ಪಡೆದುಕೊಂಡು ಯಶಸ್ವಿ ಉದ್ಯಮಿಗಳಾಗಿ ಎಂದು ಶುಭ ಹಾರೈಸಿದರು.

ಅದೇ ರೀತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ. ಎಂ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಯಾವುದೇ ಬೇರೆ ಉದ್ಯಮಗಳಿಗಿಂತ ಕೃಷಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ, ಆರೋಗ್ಯ ಭಾಗ್ಯ ಹಾಗೂ ಆರ್ಥಿಕವಾಗಿ ಸದೃಢರಾಗಿ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡುಯುವಲ್ಲಿ ನಮ್ಮ ಪಾತ್ರವು ಬಹಳ ಇದೆ. ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಸಂಸ್ಥೆಯ ಉಪನ್ಯಾಸಕರಾದ ಶ್ರೀ. ಚೈತ್ರ. ಕೆ ನಿರೂಪಿಸಿ, ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ಶ್ರೀ. ಸಂತೋಷ್ ವಂದಿಸಿದರು.

Leave a Reply

Your email address will not be published. Required fields are marked *