×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮಂದಾರ್ತಿ ಸೇವಾ ಸಹಕಾರ ಸಂಘದ ನಡೂರು ಶಾಖೆಯ ನೂತನ ಕಟ್ಟಡ ‘ಸಹಕಾರ ಸಾನಿಧ್ಯ’ ಲೋಕಾರ್ಪಣೆ

ಬ್ರಹ್ಮಾವರ : ಮಂದಾರ್ತಿ ಸೇವಾ ಸಹಕಾರ ಸಂಘದ ನಡೂರು ಶಾಖೆಯ ಸಂಪೂರ್ಣ ಹವಾ ನಿಯಂತ್ರಿತ ನೂತನ ಕಟ್ಟಡ ಸಹಕಾರ ಸಾನಿಧ್ಯದ ಉದ್ಘಾಟನೆ ಸಮಾರಂಭ ಭಾನುವಾರ ನಡೆಯಿತು.

ಅಧ್ಯಕ್ಷತೆ ವಹಿಸಿ ಮತ್ತು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಗೌರವಾರ್ಪಣೆ ಮಾಡಿದ ಮಂದಾರ್ತಿ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಚ್. ಗಂಗಾಧರ ಶೆಟ್ಟಿ ಮಾತನಾಡಿ, ದಿ. ಶಿವರಾಮ ಶೆಟ್ಟಿ ಸಹಕಾರದಿಂದ 1983ರಲ್ಲಿ ಪ್ರಾರಂಭಗೊಂಡ ನಡೂರು ಶಾಖೆಯು 16 ಕೋಟಿ ರೂ. ಠೇವಣಾತಿ ಹೊಂದಿ, ಹೆಮ್ಮರವಾಗಿ ಬೆಳೆದಿದೆ. ಮಂದಾರ್ತಿ ಸೇವಾ ಸಹಕಾರ ಸಂಘದ ವ್ಯಾಪ್ತಿಯ 5 ಗ್ರಾಮದಲ್ಲಿ ಶಾಖೆ ತೆರೆಯುವ ಇರಾದೆ ಹೊಂದಿದೆ. ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಸಂಪೂರ್ಣ ಸಹಕಾರ, ಆಡಳಿತ ಮಂಡಳಿ, ಸಿಬ್ಬಂದಿ, ಗ್ರಾಹಕರ ಸಹಕಾರದಿಂದ ಮಂದಾರ್ತಿ ಸೇವಾ ಸಹಕಾರ ಸಂಘ ಇಷ್ಟೊಂದು ಬಲಿಷ್ಠವಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು.

ಭದ್ರತಾ ಕೊಠಡಿ, ಭದ್ರತಾ ಕೋಶ, ಕಂಪ್ಯೂಟರ್ ಕೊಠಡಿ, ಗೋದಾಮು, ಸ್ವಸಹಾಯ ಸಂಘಗಳ ಉದ್ಘಾಟನೆ, ಠೇವಣಿ ಪತ್ರ ಬಿಡುಗಡೆ, ಸಾಲ ಪತ್ರ ಬಿಡುಗಡೆ, ಉಳಿತಾಯ ಪುಸ್ತಕ ವಿತರಣೆ ಮಾಡಲಾಯಿತು.

ಡಾ.ಎಂ.ಎನ್.ರಾಜೇಂದ್ರ ಕುಮಾರ್, ನಡೂರು ಪದ್ಮ ಬಿ. ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗುತ್ತಿಗೆದಾರ ಪ್ರಮೋದ ಶೆಟ್ಟಿ ಅಕ್ಷಯ ಶೆಟ್ಟಿ ಅವರನ್ನು ಗೌರವಿಸಲಾಯಿತು. zಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಲಿ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ಬಿ. ಅಶೋಕ ಕುಮಾರ್ ಶೆಟ್ಟಿ ಮೈರ್ಮಾಡಿ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕೇಸರ, ಎಚ್. ಧನಂಜಯ ಶೆಟ್ಟಿ ಹಿರಿಯರಾದ ಶೇಡಿಕೊಡ್ಲು ವಿಠಲ ಶೆಟ್ಟಿ, ಹಿರಿಯಡಕ ರೈತರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಇನ್ನಂಜೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ರಾಜೇಶ ರಾವ್, ಕಾಡೂರು ಗ್ರಾಪಂ ಅಧ್ಯಕ್ಷ ಜಲಂಧರ ಶೆಟ್ಟಿ ಕುಂದಾಪುರ ವಿಭಾಗದ, ಸಹಕಾರ ಸಂಘಗಳ ಸಹಾಯಕ ಉಪನಿಬಂಧಕ ಜೆ. ಸುಧೀರ ಕುಮಾರ್, ಮಂದಾರ್ತಿ ಸೇವಾ ಸಹಕಾರ ಸಂಘದ ನಿರ್ದೇಶಕರು, ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲೆಯ ನಾನಾ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯ ನಿರ್ವಹಣಾಧಿ ಕಾರಿಗಳು, ನಿರ್ದೇಶಕರು, ಮಂದಾರ್ತಿ ಸೇವಾ ಸಹಕಾರ ಸಂಘದ ಸಿಬ್ಬಂದಿ, ನಿತ್ಯನಿಧಿ ಸಂಗ್ರಾಹಕರು, ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಸುರೇಶ ಶೆಟ್ಟಿ ಕಾಡೂರು ಸ್ವಾಗತಿಸಿ, ಜಲಂಧರ ಶೆಟ್ಟಿ ವಂದಿಸಿದರು. ಶಿಕ್ಷಕ ಪ್ರಶಾಂತ ಶೆಟ್ಟಿ ಹಾವಂಜೆ ಮತ್ತು ಎ.ಕೆ. ಶೆಟ್ಟಿ ನಡೂರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *