ಕಿನ್ನಿಮೂಲ್ಕಿ ಶ್ರೀ ವೀರಭದ್ರ ದೇವಸ್ಥಾನದ ವಠಾರದಲ್ಲಿ ನವೀಕೃತ ಗೊಂಡ ಹವಾನಿಯಂತ್ರಿತ ಶ್ರೀ ವೀರ ಭದ್ರ ಕಲಾಭವನವನ್ನು ಗುರುವಾರ ನಂದಕುಮಾರ ತಂತ್ರಿ ಉದ್ಘಾಟಿಸಿದರು ನಂತರ ಮಾತನಾಡಿದ ಅವರು ದಿನದಿಂದ ದಿನಕ್ಕೆ ತಾಪಮಾನ ಜಾಸ್ತಿ ಆದ ಹಾಗೆ ನಮಗೆ ಯಾವುದೇ ಶುಭ ಸಮಾರಂಭದಲ್ಲಿ ನಮ್ಮ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳುವುದಕ್ಕೆ ಅನಿವಾರ್ಯವಾಗಿ ಹವಾ ನಿಯಂತ್ರಿತ ಕಟ್ಟಡ ನಿರ್ಮಾಣ ಮಾಡಿದ್ದು ಇದು ಒಂದು ಶುಭ ಸಂದೇಶ ದೇವತಾ ಸಾನ್ನಿಧ್ಯದಲ್ಲಿರುವ ಕಲ್ಯಾಣ ” ಮಂಟಪದಲ್ಲಿ ವಿವಾಹಾದಿ ಸತ್ಕಾರ್ಯ ಗಳು ನೆರವೇರಿದರೆ ಶ್ರೀ ದೇವರು, * ಗುರು, ಹಿರಿಯರ ಪೂರ್ಣ ಆಶೀ ರ್ವಾದ ಲಭಿಸಿ ಸಂಸಾರ ಸುಖಮಯ ವಾಗಿ ಸಾಗಲಿದೆ. ಸಂಸಾರದಲ್ಲಿ ಭಿನ್ನಾಭಿ ಪ್ರಾಯ, ಬಿಕ್ಕಟ್ಟು ಎದುರಾಗದು. ಈ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಿ ಮುಂದಡಿ ಇಡಬೇಕಾಗಿದೆ ಎಂದರು
ಅಧ್ಯಕ್ಷತೆ ವಹಿಸಿದ್ದ ಆಡಳಿತ ಮೊತ್ತೇಸರ ಪ್ರಭಾಶಂಕರ ಪದ್ಮಶಾಲಿ ಬಾನಬೆಟ್ಟು ಮಾತನಾಡಿ, ನವೀಕೃತ ಕಲಾಭವನವು ಸಂಪೂರ್ಣ ಹವಾ ನಿಯಂತ್ರಿತವಾಗಿದ್ದು 500 ಮಂದಿಯ ಆಸನ ವ್ಯವಸ್ಥೆ ಹೊಂದಿದೆ. 1987ರಲ್ಲಿ ಅಧ್ಯಕ್ಷರಾಗಿದ್ದ কেক। ವ್ಯಾಸರಾಯ ಶೆಟ್ಟಿಗಾರ್, ಆಡಳಿತ ಮೊತ್ತೇಸರ ಕೆ. ಮಹಾಬಲ ಪದ್ಮಶಾಲಿ ಅವರ ನೇತೃತ್ವದಲ್ಲಿ ಈ ಕಲಾಭವನ ನಿರ್ಮಾಣ ಗೊಂಡಿತ್ತು
ಹಿರಿಯರಿಗೆ ಸಮ್ಮಾನ
ಮಹೇಂದ್ರ ಶೆಟ್ಟಿಗಾರ್ ದೊಡ್ಡಣಗುಡ್ಡೆ ಎಸ್. ಸದಾನಂದ ಶೆಟ್ಟಿಗಾರ್ ಉದ್ಯಾವರ, ಕೆ. ಮಾಧವಶೆಟ್ಟಿಗಾರ್ ಬೈಲೂರು, ಮಹೇಂದ್ರ ಶೆಟ್ಟಿಗಾರ್ ದೊಡ್ಡಣಗುಡ್ಡೆ ಜೋತಿಶ್ಚಂದ್ರ ಯು.ಕೆ. ಬೆಂಗಳೂರು, ಕೆ. ರಾಮಚಂದ್ರ ಶೆಟ್ಟಿಗಾರ್ ದೊಡ್ಡಣಗುಡ್ಡ ವಿ ರಾಮಕೃಷ್ಣ ಶೆಟ್ಟಿಗಾರ್ ಬನ್ನಂಜೆ ಅವರನ್ನು ಸಮ್ಮಾನಿಸಲಾಯಿತು.

ಅಮೃತ ಕೃಷ್ಣಮೂರ್ತಿ, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ರವಿ ಶೆಟ್ಟಿಗಾರ್ ಕಾರ್ಕಳ, ಬಂಟರ ಯಾನೆ ನಾಡವರ ಮಾತೃ ಸಂಘ ತಾಲೂಕು ಸಮಿತಿ ಸಂಚಾಲಕ ಎಚ್. ಶಿವಪ್ರಸಾದ್ ಹೆಗ್ಡೆ ದ.ಕ. ಕನ್ನರ್ಪಾಡಿ-ಕಡೆಕಾರ್ ಬಿಲ್ಲವ ಸೇವಾ ಸಂಘ ಅಧ್ಯಕ್ಷ ಭಾಸ್ಕರ ಸುವರ್ಣ, ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷ ಜಯ ಸಿ. ಕೋಟ್ಯಾನ್, ರಾಮ ಕ್ಷತ್ರಿಯ ಸಂಘ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ ಶುಭ ಹಾರೈಸಿದರು.
ಎಸ್. ಶಿವಪ್ರಸಾದ್ ಶೆಟ್ಟಿಗಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯ ದರ್ಶಿ ಕೆ. ಗಂಗಾಧರ ಶೆಟ್ಟಿಗಾರ್ ವಂದಿಸಿದರು.ನಾಗರಾಜ್ ಕಿನ್ನಿಮೂಲ್ಕಿ ಕಾರ್ಯಕ್ರಮ ನಿರೂಪಿಸಿದರು.

