×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಕಾಪು: ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮ ಗಾಂಧೀಜಿ ಮತ್ತು ಭಾರತದ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮದಿನವನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು. ಕಾಪು ರಾಜೀವ್ ಭವನ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶ್ರೀ ವಿನಯ್ ಕುಮಾರ್ ಸೊರಕೆ ಭಾಗವಹಿಸಿ ಮಾತನಾಡಿದರು. ಅವರು ಗಾಂಧೀಜಿ ಮತ್ತು ಶಾಸ್ತ್ರಿ ಅವರ ಆದರ್ಶಗಳು ಹಾಗೂ ತ್ಯಾಗಮಯ ಜೀವನ ಶೈಲಿ ಇಂದು ಸಮಾಜಕ್ಕೆ ದಾರಿದೀಪವಾಗಿದೆ ಎಂದು ತಮ್ಮ ಸಂದೇಶದಲ್ಲಿ ಹೇಳಿದರು. ಗಾಂಧೀಜಿ ಅವರ ಅಗಲಿಕೆಯ ಸಂದರ್ಭದಲ್ಲಿ ವಿಶ್ವಸಂಸ್ಥೆಯು ಇತಿಹಾಸದಲ್ಲೇ ಮೊತ್ತಮೊದಲು ಎಲ್ಲಾ ದೇಶಗಳ ಬಾವುಟಗಳನ್ನು ಅರ್ಧಕ್ಕೆ ಇಳಿಸಿ ಗೌರವ ಸಲ್ಲಿಸಿತ್ತು ಎಂಬ ವಿಚಾರವನ್ನು ಅವರು ಸ್ಮರಿಸಿದರು.

ಮಹಾತ್ಮ ಗಾಂಧೀಜಿ ಪ್ರಪಂಚಕ್ಕೆ ಅಹಿಂಸೆ ತತ್ವವನ್ನು ತೋರಿಸಿದ ಮಹಾನ್ ನಾಯಕರು. ಸತ್ಯ ಮತ್ತು ಅಹಿಂಸೆಯ ಮೂಲಕವೇ ಸ್ವಾತಂತ್ರ್ಯ ಪಡೆಯಬಹುದು ಎಂಬ ನಂಬಿಕೆಯನ್ನು ಜನಮಾನಸದಲ್ಲಿ ಬಿತ್ತಿದವರು ಗಾಂಧೀಜಿ. ಅವರ ಅಹಿಂಸೆ ಮಾರ್ಗ ಇಂದು ಕೂಡಾ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಪ್ರೇರಣೆಯಾಗಿದೆ.

ಈ ಸಂದರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಸುಕುಮಾರ್, ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮ್ಮದ್ ನಿಯಾಜ್, ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಪುರ್ದ್ದೀನ್ ಶೇಖ್, ರಕ್ಷಣಾಪುರ ಜವಾನರ್ ಕಾಪು ಇದರ ಅಧ್ಯಕ್ಷ ನವೀನ್ ಎನ್. ಶೆಟ್ಟಿ ಸೇರಿದಂತೆ ಮುಖಂಡರಾದ ದಿವಾಕರ್ ಶೆಟ್ಟಿ, ಸಿಮಿ ಡಿಸೋಜ, ಅಶ್ವಿನಿ ಬಂಗೇರ, ಶೋಭಾ ಬಂಗೇರ, ಸದಾನಂದ್ ಕಾಂಚನ್, ಅಶೋಕ್ ನೈರಿ, ಜ್ಯೋತಿ ಮೆನನ್, ಆಶಾ ದೀಪಕ್ ಎರ್ಮಾಲ್, ಗಣೇಶ್ ಆಚಾರ್ಯ, ಯಶವಂತ್ ಪಲಿಮಾರು, ನಾಯೀಮ್ ಕಟಪಾಡಿ, ಸನವಾರ್ ಶೇಖ್ ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *