×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪೂರ್ಣಪ್ರಜ್ಞ (ಸ್ವಾಯತ್ತ) ಕಾಲೇಜಿನಲ್ಲಿ ‘ಹಿಂದಿ ದಿವಸ’ ಆಚರಣೆ

ಉಡುಪಿ, ಸೆಪ್ಟೆಂಬರ್ 27- ಪೂರ್ಣಪ್ರಜ್ಞ (ಸ್ವಾಯತ್ತ) ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಆಶ್ರಯದಲ್ಲಿ ಹಿಂದಿ ವಿಭಾಗದ ವತಿಯಿಂದ ‘ಹಿಂದಿ ದಿವಸ’ ವನ್ನು ಸಡಗರದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಮತಿ ಕೃತಿಕಾ ಪಿ. ಶೆಣೈ ಅವರು ಭಾಷೆಯ ಉತ್ಪತ್ತಿ ಮತ್ತು ವಿಕಾಸದ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿ, ಭಾಷೆ ಮನುಷ್ಯನ ಜೀವನದಲ್ಲಿ ಅತೀವ ಪ್ರಮುಖ ಪಾತ್ರ ವಹಿಸುವುದನ್ನು ಸ್ಪಷ್ಟಪಡಿಸಿದರು. ಅವರು ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಭಾಷಾಜ್ಞಾನ ಅತ್ಯಂತ ಅವಶ್ಯಕವಾಗಿದ್ದು, ರಾಷ್ಟ್ರದ ಏಕತೆಯನ್ನು ಬಲಪಡಿಸುವಲ್ಲಿ ಭಾಷೆಯ ಮಹತ್ವ ಅನನ್ಯ ಎಂದು ವಿವರಿಸಿದರು. ವಿಶೇಷವಾಗಿ ನಮ್ಮ ದೇಶದ ರಾಜ್ಯಭಾಷೆಯಾಗಿರುವ ಹಿಂದಿ ಭಾಷೆಯ ಕುರಿತು ವಿದ್ಯಾರ್ಥಿಗಳಲ್ಲಿ ಗೌರವ, ಅರಿವು ಮತ್ತು ಹೆಮ್ಮೆಯನ್ನು ಬೆಳೆಸುವಂತೆ ಕರೆ ನೀಡಿದರು.

ಹಿಂದಿ ದಿವಸದ ಅಂಗವಾಗಿ ವಿವಿಧ ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದು, ವಿಜೇತರನ್ನು ಗೌರವಿಸಲು ಬಹುಮಾನ ವಿತರಣೆಯನ್ನು ಮುಖ್ಯ ಅತಿಥಿಗಳಿಂದ ನೆರವೇರಿಸಲಾಯಿತು.

ಕಾರ್ಯಕ್ರಮಕ್ಕೆ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಆನಂದ ರಾಯಮಾನೆ ಅವರು ಅಧ್ಯಕ್ಷತೆ ವಹಿಸಿದ್ದರು . ವಿಭಾಗದ ಅಧ್ಯಾಪಕಿ ಭೈರವಿ ಪಾಂಡೆ ಹಾಗೂ ಇತರ ಅಧ್ಯಾಪಕರು ಉಪಸ್ಥಿತರಿದ್ದು.

Leave a Reply

Your email address will not be published. Required fields are marked *