ನಾಲಿಗೆ ವ್ಯಕ್ತಿಯ ಸಂಸ್ಕೃತಿಯನ್ನು ತಿಳಿಸುತ್ತದೆ. ಶಾಸಕ ಭರತ ಶೆಟ್ಟಿಯ ಸಂಸ್ಕೃತಿ ಹೀನ ಮನಸ್ಸು ಮತ್ತು ನಾಲಿಗೆಗೆ ಲೋಕ ಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯ ರಾಜನೀತಿಜ್ಞತೆ ಮತ್ತು ಸಾಂವಿಧಾನಿಕ ಪ್ರೌಡಿಮೆಯನ್ನು ಅಳೆಯುವ ಯೋಗ್ಯತೆ ಇಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ್ ಹೇಳಿದ್ದಾರೆ.ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂಬ ಗಾದೆಯಂತೆ ” ಹಿಂಸೆಯನ್ನು ಪ್ರತಿಪಾದಿಸುವವರು ಅಹಿಂಸೆಯನ್ನು ಜೀವಾಳವಾಗಿಸಿಕೊಂಡಿರುವ ಹಿಂದುಗಳಾಗಲು ಸಾಧ್ಯವಿಲ್ಲ ” ಎಂಬ ರಾಹುಲ್ ಗಾಂಧಿಯ ಮಾತು ಬಹುಶ ಈ ಬಿಜೆಪಿಯ ಅಪರ ಹಿಂದೂ ಧರ್ಮ ಚಿಂತಕರಿಗೆ ಭಯ ಹುಟ್ಟಿಸಿರ ಬೇಕು. ಪರಮೇಶ್ವರನ ಮೂರನೇ ಕಣ್ಣು ಹಿಂದು ಧರ್ಮವನ್ನು ಅಪರ ದಾರಿಯಲ್ಲಿ ತಮ್ಮ ರಾಜಕೀಯ ತೀಟೆಗೆ ಬಳಸಿಕೊಳ್ಳುತ್ತಿರುವ ಬಿಜೆಪಿಯವರನ್ನು ಸುಡಬೇಕೇ ಹೊರತು ಕಾಂಗ್ರೆಸ್ಸಿನ ನೈಜ ಹಿಂದುಗಳನ್ನಲ್ಲ. ಬಹುಶ ಈ ಭರತ ಶರೆಟ್ಟಿ ಮತ್ತು ಗ್ಯಾಂಗಿಗೆ ಹಿಂದುಧರ್ಮದ ಪಾವಿತ್ರ್ಯ ಮತ್ತು ಉಧಾರತ್ವದ ಅರಿವಿಲ್ಲ. ಅರಿವಿದ್ದರೆ ಹೀಗೆ ಸಂಸ್ಕೃತಿಹೀನ ಮಾತುಗಳನ್ನು ಆಡುತ್ತಿರಲಿಲ್ಲ.
ಬಿಜೆಪಿಯ ಮತಾಂಧ ಶಕ್ತಿಯಡಿಯಲ್ಲೇ ಬೆಳೆದು ಬಂದ ಉಡುಪಿ ಶಾಸಕರಿಗೆ ಮತಾಂಧತೆಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಇಂತಹ ಮತಾಂಧ ಶಕ್ತಿಗಳನ್ನು ಬೆಂಬಲಿಸಿ ಮಾತನಾಡದಿದ್ದರೆ ಬಿಜೆಪಿಯಲ್ಲಿ ತನಗೆ ಬೆಂಬಲವಿಲ್ಲ ಎಂಬ ಭಯ ಕಾಡುತ್ತಿರಬೇಕು ಎಂದು ಅವರುತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

