
ಉಡುಪಿ: ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಕಾಂಚನ್ ಉಡುಪಿಯ ಜಾಮೀಯಾ ಮಸೀದಿಗೆ ಇಂದು ಭೇಟಿ ನೀಡಿದರು. ನೆರೆದಿದ್ದ ಜನರಲ್ಲಿ ಮೇ 10 ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ನಮ್ಮೆಲ್ಲರ ಹಕ್ಕು. ನೀವು ಇಚ್ಚಿಸಿದ ಪಕ್ಷಕ್ಕೆ ಮತ ನೀಡಿ ಆದರೆ ಯಾವುದೇ ಕಾರಣಕ್ಕೂ ಮತದಾನ ಮಾಡದೆ ಇರಬೇಡಿ ಎಂದು ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಿದರು. ಈ ಬಾರಿ ಪಾರದರ್ಶಕವಾದ ಸರಕಾರ ತರಬೇಕು. ಉಡುಪಿಯಲ್ಲೂ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬಲ್ಲ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮ ಎಂದು ಕರೆ ನೀಡಿದರು.

