×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಅತ್ರಾಡಿ ವಿವಿಧ ಕಾಮಗಾರಿಗಳಿಗೆ ಸುಮಾರು 5 ಕೋಟಿ 50 ಲಕ್ಷ ಅನುದಾನ ಗುದ್ದಲಿ ಪೂಜೆ ನೆರವೇರಿಸಿದ ಲಾಲಾಜಿ ಆರ್ ಮೆಂಡನ್

ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಅತ್ರಾಡಿ ಭಾಗದ ಬಹುಬೇಡಿಕೆಯ ವಿವಿಧ ಕಾಮಗಾರಿಗಳಿಗೆ ಸುಮಾರು 5 ಕೋಟಿ 50 ಲಕ್ಷ ಅನುದಾನ ಒದಗಿಸಿ ಗುದ್ದಲಿ ಪೂಜೆ ನೆರವೇರಿಸಿದರು ಅತ್ರಾಡಿಯಿಂದ ಪರೀಕ ಮೂಲಕ ಬೆಳ್ಳಂಪಲ್ಲಿ ರಸ್ತೆ ಅಗಲೀಕರಣಕ್ಕೆ ಸುಮಾರು 5 ಕೋಟಿ ಒದಗಿಸಿದ್ದು ಇದರ ಶಿಲಾನ್ಯಾಸ ನೆರವೇರಿಸಿದರು ಹಾಗೂ ಬೈರಾಂಜೆ ಶ್ರೀ ಭವಾನಿಶಂಕರ ದೇವಸ್ಥಾನ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸುಮಾರು 50 ಲಕ್ಷ ಒದಗಿಸಿ ಕಾಮಗಾರಿ ಪೂರ್ತಿಗೊಂಡಿದ್ದು ಇದರ ಲೋಕಾರ್ಪಣೆಯನ್ನು ಮಾಡಿದರು ಮತ್ತು ಬೈರಾಂಜೆ ರಸ್ತೆ ಕಾಮಗಾರಿ ಮೇಲೆ ತನ್ನ ಜಾಗ ಬಿಟ್ಟು ಕೊಟ್ಟು ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಮಾಡಿಕೊಟ್ಟ ವಿನ್ಸಟ್ ಸಾಲಿನ್ಸ್ ರವರಿಗೆ ಊರವರ ಪರವಾಗಿ ಮಾನ್ಯ ಶಾಸಕರು ಸನ್ಮಾನಿಸಿದರು
ಈ ಸಂದರ್ಭದಲ್ಲಿ ಅತ್ರಾಡಿ ಪಂಚಾಯತ್ ಅಧ್ಯಕ್ಷರು ರೂಪ ಶೆಟ್ಟಿ, ಉಪಾಧ್ಯಕ್ಷರು ರತ್ನಾಕರ ಶೆಟ್ಟಿ, ಕುಕ್ಕೆಹಳ್ಳಿ ಪಂಚಾಯತ್ ಅಧ್ಯಕ್ಷರು ಪುರಂದರ ಕೋಟ್ಯಾನ್, ಕೊಟ್ಟಿಬೆಟ್ಟು ಪಂಚಾಯತ್ ಉಪಾಧ್ಯಕ್ಷರು ಸದಾನಂದ ಪ್ರಭು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಉಪೇಂದ್ರ ನಾಯಕ್ ಸ್ಥಳೀಯ ಮುಖಂಡರು, ಪಕ್ಷದ ಪ್ರಮುಖರಾದ ಸತ್ಯಾನಂದ ನಾಯಕ್, ಗುರುನಂದನ್ ನಾಯಕ್, ಶುಭಕರ್ ಶೆಟ್ಟಿ, ಪ್ರವೀಣ್ ಪೂಜಾರಿ ಹಿರೇಬೆಟ್ಟು, ಹರಿಜೀವನ್ ಹೆಗ್ಡೆ, ಪ್ರಸಾದ್ ಹೆಗ್ಡೆ, ಶ್ರೀನಿಧಿ ಹೆಗ್ಡೆ, ಪ್ರವೀಣ್ ಪ್ರಭು, ಶಂಕರ್ ಕುಕ್ಕೆಹಳ್ಳಿ, ಪ್ರಭಾಕರ್, ಶಿಲ್ಪಾ ಸಾಲ್ಯಾನ್, ಪ್ರತಿಮಾ, ಸೌಮ್ಯ ಶೆಟ್ಟಿ, ಉಷಾ, ಹಾಗೂ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸೋಮನಾಥ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *