
ಸಿಡ್ನಿ: ಅತ್ಯಾಚಾರ ಆರೋಪಕ್ಕೊಳಗಾಗಿ ಜೈಲು ಸೇರಿದ್ದ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣಗುಣಗೆ 11 ದಿನಗಳ ಬಳಿಕ ಸಿಡ್ನಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಬಂಧನದ ನಂತರ ಅವರನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಸಿಡ್ನಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಕೋರ್ಟ್ ಜಾಮೀನು ನಿರಾಕರಿಸಿತ್ತು. ಇದರಿಂದ ದನುಷ್ಕ ಗುಣತಿಲಕ 11 ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದರು. ಇಂದು ಸಿಡ್ನಿಯ ಸ್ಥಳೀಯ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸಹಕಾರದೊಂದಿಗೆ ಜಾಮೀನು ಮಂಜೂರಾಗಿದ್ದು ಸಿಡ್ನಿ ನ್ಯಾಯಾಲಯ 1 ಕೋಟಿ ರೂ. ಠೇವಣಿ ಇಟ್ಟು ಜಾಮೀನು ನೀಡಿದ್ದು, ಜೊತೆಗೆ ಟಿಂಡರ್ ಸೇರಿದಂತೆ ಯಾವುದೇ ಇತರ ಡೇಟಿಂಗ್ ಅಪ್ಲಿಕೇಶನ್ಗಳನ್ನು ಬಳಸದಿರುವಂತೆ ಷರತ್ತು ವಿಧಿಸಿದೆ. ಪ್ರತಿದಿನ 2 ಬಾರಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಸ್ಪೋರ್ಟ್ನೊಂದಿಗೆ ಸಿಡ್ನಿ ಪೊಲೀಸ್ ಠಾಣೆಗೆ ಗುಣತಿಲಕ ಹಾಜರಾಗಬೇಕು. ಮತ್ತು ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಮನೆಯಿಂದ ಹೊರ ಹೋಗದಂತೆ ನಿಷೇಧ ಹೇರಿದೆ.

