×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು ಬ್ಲಾಕ್ ಕಾಂಗ್ರೆಸ್ ನ ಘಟಕ ಗಳ ವತಿಯಿಂದ ತುಡರ ಪರ್ಬದ ಗಮ್ಮತ್ ; ಸನ್ಮಾನ ; ಅನಾಥಾಶ್ರಮಗಳಿಗೆ ಉಡುಪು ವಿತರಣೆ

ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿನಯ ಕುಮಾರ್ ಸೊರಕೆ ಉಪಸ್ಥಿತಿಯಲ್ಲಿ ತುಡರ್ ಪರ್ಬದ ಗಮ್ಮತ್ 2022 ಇದರ ಅಂಗವಾಗಿ ಅನಾಥರಿಗೆ ನಿರಾಶ್ರೀತರಿಗೆ ಉಡುಪುಗಳನ್ನು ಸಿಹಿ ತಿಂಡಿಗಳನ್ನು ವಿತರಿಸುವ  ಮೂಲಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಮೋಹನ್ ನಂಬಿಯಾರ್ ಉದ್ಘಾಟಿಸಿದರು ಗೀತಾ ವಾಗ್ಲೆ ಮಾತನಾಡಿ  ಪ್ರತೀ ವರ್ಷವು ದೀಪಾವಳಿಯ ಸಂಭ್ರಮ ದಲ್ಲಿ ಹೊಸ ತನವನ್ನು ಆಚರಿಸುದನ್ನು ನಾವು ಕಾಪು ಬ್ಲಾಕ್ ನಲ್ಲಿ ನೋಡುತಿರುತ್ತೆವೆ ಈ ಸಲ ಕೂಡ ಒಂದು ನಿರ್ಗತಿಕರಿಗೆ ಆಶ್ರಯವನ್ನು ಕೊಟ್ಟು ಆಶ್ರಮ ನಡೆಸುವಂತಹ ಮೂರು ವ್ಯಕ್ತಿಗಳಿಗೆ ಅಭಿನಂದನೆ ಗೌರವ ಕೊಡುತ್ತೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ದೀಪಾವಳಿ ಬೆಳಕಿನ ಹಬ್ಬ ಬೆಳಕು ಜ್ಞಾನದ ಸಂಕೇತವಾಗಿದೆ ಪ್ರತಿಯೊಂದು ಹಬ್ಬಗಳು ಕೂಡ ಸಮಾಜದಲ್ಲಿ ಉತ್ತಮ ಸಂದೇಶವನ್ನು ನೀಡುತ್ತದೆ ಕಾಂಗ್ರೆಸ್ ಪಕ್ಷ ಬೇರೆ ಬೇರೆ ಧರ್ಮ ಬೇರೆ ಬೇರೆ ಜಾತಿ ಬೇರೆ ಬೇರೆ ಭಾಷೆ ವಿಭಿನ್ನ ಸಂಸ್ಕೃತಿಯನ್ನೆಲ್ಲಾ ಒಟ್ಟು ಗೂಡಿಸುವಂತಹ ಒಂದು ಪಕ್ಷ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಮಲ್ಲಾರು ಆಶ್ರಮದ ಮಹಮದ್ ಶಫಿ ಮದನಿ ಕಟಪಾಡಿ ಕಾರುಣ್ಯ ಆಶ್ರಮದ ಕುಮಾರ್ ಪಾಂಗಾಳ ಆಸರೆ ಹಿರಿಯರ ವಸತಿ ದಾಮದ ಬೆನ್ವಿನ್ ಪಾಂಗಳ ಇವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ  ನವೀನ್ ಚಂದ್ರ ಸುವರ್ಣ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಗೀತಾ ವಾಗ್ಲೆ ಹಿಂದುಳಿದ ವರ್ಗದ ಅಧ್ಯಕ್ಷ ದೀಪಕ್ ಎರ್ಮಾಲ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಸರ್ಪುದ್ದೀನ್ ಶೇಕ್ ಗಣೇಶ್ ಕೋಟಿಯನ್ ಯೂಥ್ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ಸುಧೀರ್ ಹೆಜಮಾಡಿ ಮಧ್ವರಾಜ್ ಕಾಪು ನವೀನ್ ಶೆಟ್ಟಿ ಸಾದಿಕ್ ಶಕುಂತಲ ಶೆಟ್ಟಿ ಜ್ಯೋತಿ ಮೆನನ್ ಅಶ್ವಿನಿ ಬಂಗೇರ ಯಶವಂತ್ ಪಾಲಿಮಾರ್ ಉಸ್ಮಾನ್ ಕಾಪು ಮುಂತಾದವರು ಉಪಸ್ಥಿತರಿದ್ದರು ದೀಪಕ್ ಎರ್ಮಾಲ್ ಸ್ವಾಗತಿಸಿದರು ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು

 

Leave a Reply

Your email address will not be published. Required fields are marked *