×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮಕ್ಕಳ ನಗುವಿನಲ್ಲಿ ದೇಶದ ಭವಿಷ್ಯ: ಕಂಚಿನಡ್ಕ-ನಡ್ಸಾಲು ಭಾಗದ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ

ಕಾಪು ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್ ವತಿಯಿಂದ ಆಟೋಟ ಸ್ಪರ್ಧೆ, ಬಹುಮಾನ ವಿತರಣೆ ಹಾಗೂ ಸಿಹಿತಿಂಡಿ ಹಾಗೂ ಸಮವಸ್ತ್ರ ವಿತರಣೆ

ಪಡುಬಿದ್ರಿ: ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಮಾಜಿ ಪ್ರಧಾನಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ಮಕ್ಕಳ ದಿನಾಚರಣೆಯನ್ನು ಪಡುಬಿದ್ರಿ ನಡ್ಸಾಲು ಭಾಗದ ಕಂಚಿನಡ್ಕ ಅಂಗನವಾಡಿ ಕೇಂದ್ರ ,ಸಿಟಿ ಅಂಗನವಾಡಿ ಕೇಂದ್ರ, ಅಬ್ಬೇಡಿ ಅಂಗನವಾಡಿ ಕೇಂದ್ರ ಹಾಗೂ ನಡ್ಸಾಲು ಎಂಟನೆ ವಾರ್ಡಿನ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಕಾಪು ರಕ್ಷಣಾಪುರ ಅಧ್ಯಕ್ಷರು ನವೀನ್ ಎನ್ ಶೆಟ್ಟಿ ರವರು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನವೀನ್ ಎನ್ ಶೆಟ್ಟಿ ಅವರು, “ಮಕ್ಕಳು ದೇಶದ ಅಮೂಲ್ಯ ಸಂಪತ್ತು. ಇಂದಿನ ಮಕ್ಕಳು ನಾಳಿನ ಭವಿಷ್ಯದ ಪ್ರಜೆಗಳು. ಪ್ರತಿಯೊಂದು ಮಗುವಿನಲ್ಲಿಯೂ ವಿಶೇಷ ಪ್ರತಿಭೆ ಮತ್ತು ಸಾಮರ್ಥ್ಯ ಅಡಗಿರುತ್ತದೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಪೋಷಕರು, ಶಿಕ್ಷಕರು ಹಾಗೂ ಸಮಾಜದ ಜವಾಬ್ದಾರಿಯಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಆಟ, ಸಾಂಸ್ಕೃತಿಕ ಚಟುವಟಿಕೆ ಮತ್ತು ಸೃಜನಶೀಲತೆಗೆ ಅವಕಾಶ ಕಲ್ಪಿಸಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ, ಸ್ನೇಹಭಾವ, ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಮಕ್ಕಳ ಮುಖದಲ್ಲಿನ ನಗು ಮತ್ತು ಅವರ ಸಂತೋಷವೇ ಇಂತಹ ಕಾರ್ಯಕ್ರಮಗಳ ನಿಜವಾದ ಯಶಸ್ಸು,” ಎಂದು ಹೇಳಿದರು.

ನಂತರ ಮಕ್ಕಳಿಗೆ ಸಿಹಿತಿಂಡಿ ವಿತರಿಸಿ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ಕೋರಲಾಯಿತು. ಪಡುಬಿದ್ರಿ ಸಿಟಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು..

ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಿಯಾಜ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಬುಡಾನ್ ಸಾಹೇಬ್, ಎಂ.ಎಸ್. ಶಾಫಿ, ಜ್ಯೋತಿ ಮೆನನ್, ಗಣೇಶ್ ಕೋಟ್ಯಾನ್ , ಮುಬೀನಾ ಬೇಗಂ, ಸಂಜೀವಿ ಪೂಜಾರ್ತಿ ಕಾಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಚರಿತಾ ಅಮೀನ್, ಕಾಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ತಸ್ನೀನ್ ಆರಾ, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂತೋಷ್ ಪಡುಬಿದ್ರಿ, ಪಡುಬಿದ್ರಿ ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುನಂದ ದೇವಾಡಿಗ ,ಕಾಪು ಬ್ಲಾಕ್ ವಿಧಾನ ಸಭಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೀರ್ತಿ ಕುಮಾರ್ . ಕಾರ್ಯದರ್ಶಿ ಅಶ್ರಫ್ ಪಡುಬಿದ್ರಿ ಯುವ ಕಾಂಗ್ರೆಸ್ ಮುಖಂಡರಾದ ನಹಿಮಾ ಪಡುಬಿದ್ರಿ , ಶ್ರೇಯಸ್ ಶಿರ್ವ ಅಂಗನವಾಡಿ ಶಿಕ್ಷಕಿಯರಾದ ಪ್ರಮೀಳಾ ಅರ್ಚನಾ ಮೋಕ್ಷ ಶ್ಯಾಮಲ ಹಾಗೂ ಅಂಗನಾಡಿ ಅಧ್ಯಕ್ಷೆ ರಹೆನಾ ಇತರರು ಉಪಸ್ಥಿತರಿದ್ದರು.

ಮಹಮ್ಮದ್ ನಿಯಾಜ್ ಸ್ವಾಗತಿಸಿ, ವಂದಿಸಿದರು. ಸಂತೋಷ್ ಪಡುಬಿದ್ರಿ ನಿರೂಪಿಸಿದರು..

Leave a Reply

Your email address will not be published. Required fields are marked *