31ನೇ ಬೈಲೂರು ವಾರ್ಡಿನ ಮಾಜಿ ನಗರಸಭಾ ಸದಸ್ಯರಾದ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ 31ನೇ ಬೈಲೂರು ವಾರ್ಡಿನ ಶ್ರೀನಿವಾಸ ದೇವಸ್ಥಾನದ ಮುಖ್ಯರಸ್ತೆಯಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ತನಕ ರಸ್ತೆಯನ್ನು ಸಂಪೂರ್ಣ ಡಾಮರೀಕರಣಗೊಳಿಸುವ ಕುರಿತು ಉಡುಪಿ ನಗರಸಭೆಯ ಪೌರಾಯುಕ್ತರಾದ ಮಹಾಂತೇಶ್ ಹಂಗರಗಿ ಅವರಿಗೆ ಮನವಿ ಸಲ್ಲಿಸಲಾಯಿತು.
31ನೇ ಬೈಲೂರು ವಾರ್ಡಿನ ಶ್ರೀನಿವಾಸ ದೇವಸ್ಥಾನದಿಂದ ಪಿ.ಪಿ.ಸಿ ಕಾಲೇಜಿನ ಕಡೆ ಸಾಗುವ ಮುಖ್ಯ ರಸ್ತೆಯಲ್ಲಿರುವ ಒಳಚರಂಡಿ ಪೈಪ್ಲೈನ್ ಸಣ್ಣ ಗಾತ್ರದಲ್ಲಿದ್ದ ಕಾರಣದಿಂದಾಗಿ ಕಳೆದ 13 ವರ್ಷದಿಂದ ನಿರಂತರವಾಗಿ ಒಳಚರಂಡಿಯಿಂದ ಕೊಳಚೆ ನೀರು ಮುಖ್ಯ ರಸ್ತೆಯಲ್ಲಿ ಹರಿಯುತ್ತಿದ್ದ ಕಾರಣ ಅಲ್ಲಿನ ನಾಗರಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿರುವದನ್ನು ಮನಗಂಡು ನಗರಸಭೆಯಿಂದ ರೂ. 97 ಲಕ್ಷವನ್ನು ಒಳಚರಂಡಿಯ ದೊಡ್ಡ ಗಾತ್ರದ ಪೈಪ್ಲೈನ್ಗೆ ಹಾಗೂ ರಸ್ತೆಯ ಸಂಪೂರ್ಣ ಪೆವರ್ ಫಿನಿಷ್ ಮಾದರಿಯಲ್ಲಿ ಡಾಮರೀಕರಣ ಮಾಡಲು ಮೀಸಲಿಟ್ಟಿದ್ದು ಒಳಚರಂಡಿಯ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು ಪಿ.ಪಿ.ಸಿ ಕಾಲೇಜಿನ ಕಡೆ ಸಾಗುವ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಬಂಡೆ ಸಿಕ್ಕಿದ್ದು ಈ ಪ್ರದೇಶದಲ್ಲಿ ವಸತಿಗಳಿದ್ದ ಕಾರಣ ಬ್ಲಾಸ್ಟಿಂಗ್ ಮಾಡಲು ಅಸಾಧ್ಯವಾಗಿರುವುದರಿಂದ ಮೆಷಿನ್ ಕಟ್ಟಿಂಗ್ ಮೂಲಕ ಮಳೆಗಾಲದಲ್ಲಿ ಬಂಡೆಗಳನ್ನು ಕೊರೆಯಲು ಹಲವು ಸಮಯ ಬೇಕಾಗಿದ್ದ ಕಾರಣದಿಂದಾಗಿ ಈ ಕಾಮಗಾರಿ ವಿಳಂಬವಾಗಿತ್ತು.
ಇದೀಗ ಶ್ರೀನಿವಾಸ ದೇವಸ್ಥಾನದ ಮುಖ್ಯರಸ್ತೆಯಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದವರೆಗೆ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದ್ದು ಪೌರಾಯುಕ್ತರು ಡಾಮರ್ ಪ್ಲಾಂಟ್ ತೆರೆದ ತಕ್ಷಣವೇ ಡಾಮರೀಕರಣ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈಗಾಗಲೇ ಡಾಮರ್ ಪ್ಲಾಂಟ್ಗಳು ಪುನಾರಂಭಗೊಂಡಿದ್ದು ಅತೀ ಶೀಘ್ರದಲ್ಲಿ ಉಡುಪಿ ನಗರಸಭೆಯ ಪೌರಾಯುಕ್ತರು ಈ ಕಾಮಗಾರಿಯನ್ನು ಸಂಪೂರ್ಣಗೊಳಿಸಲು ಮುತುವರ್ಜಿ ವಹಿಸಬೇಕು. ಈ ಕಾಮಗಾರಿ ವಿಳಂಬವಾದ ಕಾರಣದಿಂದ ಸ್ಥಳೀಯರಿಗೆ ಮತ್ತು ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾದುದರಿಂದ ತಕ್ಷಣವೇ ಈ ಡಾಮರೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಿ ಸ್ಥಳೀಯರಿಗೆ ಮತ್ತು ಉಡುಪಿ ನಾಗರಿಕರಿಗೆ ರಸ್ತೆಯಲ್ಲಿ ಪ್ರಯಾಣಿಸಲು ಮುಕ್ತ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಮಾಜಿ ಸದಸ್ಯರಾದ ವಿಜಯ ಪೂಜಾರಿ, ನಗರಸಭೆಯ ನಾಮನಿರ್ದೇಶಿತ ಸದಸ್ಯ ಮೊಹಮ್ಮದ್, ಪ್ರಮುಖರಾದ ಗಣೇಶ್ ನೆರ್ಗಿ, ಚಂದ್ರಮೋಹನ್ ಚಿಟ್ಪಾಡಿ, ಸತೀಶ್ ಕುಮಾರ್ ಮಂಚಿ, ಸತೀಶ್ ಕೊಡವೂರು, ಮೊಹಮ್ಮದ್ ಶೀಶ್, ಸ್ಥಳೀಯರಾದ ಮ್ಯಾಕ್ಸಿಮ್ ಡಿ’ಸೋಜಾ, ಅನಂತಕೃಷ್ಣ ಪ್ರಭು, ಕೃಷ್ಣಾನಂದ ಪೈ, ಪ್ರೀತಿ ಸಾಲಿನ್ಸ್, ಶಹನವಾಜ್, ಕ್ರಿಸ್ಟಿನಾ ಬಂಗೇರ, ಗೀತಾ ರವಿ, ಶೋಭಾ ಭಂಡಾರಿ, ಯಶಸ್ವಿನಿ, ಸಂಜಯ್ ಆಚಾರ್ಯ, ಪ್ರಜ್ವಲ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು…💐

