ಮನೆ, ಕಚೇರಿ ಹಾಗೂ ವಾಣಿಜ್ಯ ಕಟ್ಟಡಗಳ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸಕ್ಕೆ ಅಗತ್ಯವಿರುವ ಗುಣಮಟ್ಟದ ಟೈಲ್ಸ್, ಗ್ರಾನೈಟ್, ಮಾರ್ಬಲ್ ಹಾಗೂ ವಿವಿಧ ಸ್ಯಾನಿಟರಿವೇರ್ ಉತ್ಪನ್ನಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಮುಳ್ಳಿಕಟ್ಟೆಯ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಆರಂಭಗೊಂಡಿರುವ ‘ವಾತ್ಸಲ್ಯ ಸ್ಟೋನ್ಸ್ ಆ್ಯಂಡ್ ಟೈಲ್ಸ್’ ನೂತನ ಶೋರೂಂ ಅ. 30ರಂದು ಶುಭಾರಂಭಗೊಂಡಿತು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಉದ್ಯಮಿ ರಾಜು ಪೂಜಾರಿ ಅವರು ನೂತನ ಸಂಸ್ಥೆಗೆ ಶುಭ ಹಾರೈಸಿದರು. ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಸಂಸ್ಥೆಯ ಉದ್ಘಾಟನೆ ನೆರವೇರಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಮುಖಂಡರು, ಉದ್ಯಮಿಗಳು, ಸ್ನೇಹಿತರು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದು ನೂತನ ಉದ್ಯಮದ ಬೆಳವಣಿಗೆಗೆ ಶುಭ ಹಾರೈಸಿದರು.
ಸಂಸ್ಥೆಯ ಮಾಲಕರಾದ ಸುಭಾಷ್ ಅವರು ಮಾಧ್ಯಮದ ಜೊತೆ ಮಾತನಾಡಿ, ಟೈಲ್ಸ್ ಮತ್ತು ಗ್ರಾನೈಟ್ ಕ್ಷೇತ್ರದಲ್ಲಿ ಸುಮಾರು 17ರಿಂದ 18 ವರ್ಷಗಳ ಅನುಭವ ಹೊಂದಿದ್ದು, ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳ ಜತೆಗೆ ಉತ್ತಮ ಸೇವೆ ಮತ್ತು ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಶೋರೂಂ ಆರಂಭಿಸಲಾಗಿದೆ ಎಂದರು.

ಮನೆ ನಿರ್ಮಾಣ ಎಂಬುದು ಪ್ರತಿಯೊಬ್ಬರ ಜೀವನದ ಮಹತ್ವದ ಕನಸಾಗಿದ್ದು, ಮನೆಗೆ ಯಾವ ರೀತಿಯ ಟೈಲ್ಸ್, ಗ್ರಾನೈಟ್ ಅಥವಾ ಮಾರ್ಬಲ್ ಆಯ್ಕೆ ಮಾಡಬೇಕು ಎಂಬ ವಿಚಾರದಲ್ಲಿ ಗ್ರಾಹಕರು ಸಾಕಷ್ಟು ಗೊಂದಲಕ್ಕೆ ಒಳಗಾಗುತ್ತಾರೆ. ಕೇವಲ ವ್ಯಾಪಾರ ಮಾಡುವ ಉದ್ದೇಶಕ್ಕಿಂತ ಗ್ರಾಹಕರಿಗೆ ಉತ್ಪನ್ನಗಳ ಗುಣಮಟ್ಟ, ಉಪಯುಕ್ತತೆ, ಅನುಕೂಲ-ಅನಾನುಕೂಲಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ, ಅವರ ಮನೆ ಅಥವಾ ಕಟ್ಟಡಕ್ಕೆ ಯಾವ ಉತ್ಪನ್ನ ಸೂಕ್ತ ಎಂಬುದನ್ನು ತಿಳಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.
ಗ್ರಾಹಕರ ಅಗತ್ಯ, ಕಟ್ಟಡದ ವಿನ್ಯಾಸ ಹಾಗೂ ಬಜೆಟ್ಗೆ ಅನುಗುಣವಾಗಿ ಸೂಕ್ತ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಲು ಸಂಸ್ಥೆಯಲ್ಲಿ ವಿಶೇಷ ತರಬೇತಿ ಪಡೆದ ಸಿಬ್ಬಂದಿ ಮಾರ್ಗದರ್ಶನ ನೀಡಲಿದ್ದಾರೆ. ವಿವಿಧ ಬಣ್ಣ, ವಿನ್ಯಾಸ ಹಾಗೂ ಮಾದರಿಗಳಲ್ಲಿ ಗುಣಮಟ್ಟದ ಟೈಲ್ಸ್ ಮತ್ತು ಗ್ರಾನೈಟ್ಗಳು ಲಭ್ಯವಿದ್ದು, ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿಯೂ ಉತ್ಪನ್ನಗಳನ್ನು ಒದಗಿಸಲಾಗುವುದು ಎಂದರು.
ಸಿಂಪೊಲೊ, ಸನಾಟ್ ಸೇರಿದಂತೆ ಪ್ರಮುಖ ಬ್ರಾಂಡ್ಗಳ ಟೈಲ್ಸ್ ಹಾಗೂ ಜಾಕ್ವರ್, ಎಸ್ಕೋ, ಇಂಡ್ವೇರ್, ಜಾನ್ಸನ್ ಸೇರಿದಂತೆ ವಿವಿಧ ಕಂಪನಿಗಳ ಸ್ಯಾನಿಟರಿವೇರ್ ಉತ್ಪನ್ನಗಳು ಇಲ್ಲಿ ಲಭ್ಯವಿವೆ. ಇದರೊಂದಿಗೆ ಕಟ್ಟಡ ನಿರ್ಮಾಣ ಮತ್ತು ಟೈಲ್ಸ್ ಅಳವಡಿಕೆಗೆ ಅಗತ್ಯವಿರುವ ರಾಪ್ಸ್, ಎಸ್ಬಾಂಡ್ ಸೇರಿದಂತೆ ವಿವಿಧ ಉತ್ಪನ್ನಗಳನ್ನೂ ಗ್ರಾಹಕರಿಗೆ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಮುಳ್ಳಿಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಸುಲಭವಾಗಿ ಒದಗಿಸುವುದರ ಜತೆಗೆ, ಹೊರ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಗೂ ಉತ್ಪನ್ನಗಳನ್ನು ಪೂರೈಸುವ ವ್ಯವಸ್ಥೆ ಕಲ್ಪಿಸಲಾಗಿದೆ. ವಸತಿ ಕಟ್ಟಡಗಳಷ್ಟೇ ಅಲ್ಲದೆ, ಬೃಹತ್ ವಾಣಿಜ್ಯ ಕಟ್ಟಡಗಳು ಮತ್ತು ವಿವಿಧ ಯೋಜನೆಗಳಿಗೂ ಅಗತ್ಯವಿರುವ ಉತ್ಪನ್ನಗಳನ್ನು ಫ್ಯಾಕ್ಟರಿಯಿಂದ ನೇರವಾಗಿ ಪೂರೈಸುವ ವ್ಯವಸ್ಥೆ ಇದೆ. ದೊಡ್ಡ ಪ್ರಮಾಣದ ಪ್ರಾಜೆಕ್ಟ್ ಆರ್ಡರ್ಗಳನ್ನೂ ಸ್ವೀಕರಿಸಲಾಗುವುದು ಎಂದು ಅವರು ವಿವರಿಸಿದರು.
ಗ್ರಾಹಕರು ತಮ್ಮ ಮನೆ ಅಥವಾ ವಾಣಿಜ್ಯ ಕಟ್ಟಡಗಳಿಗೆ ಅಗತ್ಯವಿರುವ ಉತ್ಪನ್ನಗಳ ಆಯ್ಕೆ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆ ಎದುರಾದರೂ ಸಂಸ್ಥೆಯ ತರಬೇತಿ ಪಡೆದ ಸಿಬ್ಬಂದಿ ಸ್ಥಳೀಯವಾಗಿ ಹಾಗೂ ಅಗತ್ಯಕ್ಕೆ ತಕ್ಕಂತೆ ಮಾರ್ಗದರ್ಶನ ನೀಡಲಿದ್ದಾರೆ. ಗುಣಮಟ್ಟ, ವಿನ್ಯಾಸ ಮತ್ತು ಗ್ರಾಹಕರ ತೃಪ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸುತ್ತಮುತ್ತಲಿನ ಗ್ರಾಹಕರು ಸಂಸ್ಥೆಗೆ ಭೇಟಿ ನೀಡಿ ಉತ್ಪನ್ನಗಳ ವೈವಿಧ್ಯತೆ ಹಾಗೂ ಸೇವೆಯ ಅನುಭವ ಪಡೆದುಕೊಳ್ಳಬೇಕು ಎಂದು ಸುಭಾಷ್ ಮನವಿ ಮಾಡಿದರು.
ನೂತನ ಶೋರೂಂ ಆರಂಭದೊಂದಿಗೆ ಮುಳ್ಳಿಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶದ ಮನೆ ನಿರ್ಮಾಣ ಹಾಗೂ ಕಟ್ಟಡ ವಿನ್ಯಾಸ ಕ್ಷೇತ್ರಕ್ಕೆ ಮತ್ತೊಂದು ಆಯ್ಕೆ ಲಭ್ಯವಾದಂತಾಗಿದೆ.

