×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ: ಅಕ್ಟೋಬರ್ 31ರಂದು ಟೈಮ್ಸ್ ಸ್ಕ್ವೇರ್ ಮಾಲ್‌ನಲ್ಲಿ ‘ಜೆಕೋಡ್ಸ್ ಕ್ಲೋಥಿಂಗ್’ ಲಾಂಚ್, ಅದ್ಧೂರಿ ಫ್ಯಾಷನ್ ಶೋ

ಯುವಜನರ ನೆಚ್ಚಿನ ಟ್ರೆಂಡಿ ಉಡುಪುಗಳ ಪ್ರತಿಷ್ಠಿತ ಬ್ರ್ಯಾಂಡ್ ‘ಜೆಕೋಡ್ಸ್ ಕ್ಲೋಥಿಂಗ್’ ತನ್ನ ಅದ್ಧೂರಿ ಶುಭಾರಂಭಕ್ಕೆ ದಿನಗಣನೆ ಎಣಿಸುತ್ತಿದೆ. ಅಕ್ಟೋಬರ್ 31ರಂದು ಉಡುಪಿಯಲ್ಲಿ ಈ ಭವ್ಯ ಫ್ಯಾಷನ್ ಶೋ ಹಾಗೂ ಲಾಂಚಿಂಗ್ ಸಮಾರಂಭ ಆಯೋಜಿಸಲಾಗಿದೆ.

ಉಡುಪಿ: ಫ್ಯಾಷನ್ ಹಬ್ಬದ ಸಂಚಲನ ಆರಂಭವಾಗಿದೆ

ಜೆಕೋಡ್ಸ್ (ZECODES) ಕ್ಲೋಥಿಂಗ್‌ ಬ್ರಾಂಡ್‌ನ ಟ್ರ್ಯಾಂಡ್ ಲಾಂಚ್ ಹಾಗೂ ಆಕರ್ಷಕ ಫ್ಯಾಷನ್ ಶೋ ಅಕ್ಟೋಬರ್ 31ರಂದು ಉಡುಪಿಯ ಮಂಡಾವಿ ಟೈಮ್ ಸ್ಟೋರ್ ಮಾಲ್‌ನಲ್ಲಿ ನಡೆಯಲಿದೆ.

ಶನಿವಾರ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಬ್ರಾಂಡ್‌ನ ಹೊಸ ಕಲೆಕ್ಷನ್‌ಗಳ ಅನಾವರಣದೊಂದಿಗೆ ಫ್ಯಾಷನ್ ಶೋ ಆಯೋಜಿಸಲಾಗಿದೆ. ಆಧುನಿಕ ಫ್ಯಾಷನ್, ವೈಯಕ್ತಿಕ ಶೈಲಿ ಹಾಗೂ ವಿಭಿನ್ನ ಉಡುಪುಗಳ ವಿನ್ಯಾಸಕ್ಕೆ ಆದ್ಯತೆ ನೀಡಿರುವ ಜೆಕೋಡ್ಸ್ ಬ್ರಾಂಡ್, ನಾಲ್ಕು ಪ್ರಮುಖ ವಿಭಾಗಗಳ ಉಡುಪುಗಳನ್ನು ಪರಿಚಯಿಸಲಿದೆ.

ಕಾಲೇಜು ವೇ‌ರ್, ಆಫೀಸ್ ವೇರ್, ಎಥಿಕ್ ವೇ‌ರ್ ಹಾಗೂ ಔಟ್‌ಡೋರ್‌ ವೇ‌ರ್ ವಿಭಾಗಗಳಲ್ಲಿ ವೈವಿಧ್ಯಮಯ ವಿನ್ಯಾಸಗಳು ಪ್ರದರ್ಶನಗೊಳ್ಳಲಿವೆ. ಯುವಜನರ ಅಭಿರುಚಿಗೆ ತಕ್ಕ ಆಧುನಿಕ ಉಡುಪುಗಳ ಜೊತೆಗೆ ವೃತ್ತಿಪರ ಉಡುಪುಗಳು, ಸಾಂಪ್ರದಾಯಿಕ ಶೈಲಿಯ ಹೊಸ ರೂಪಾಂತರಗಳು ಹಾಗೂ ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತವಾದ ಉಡುಪುಗಳು ಫ್ಯಾಷನ್ ಶೋನ ಪ್ರಮುಖ ಆಕರ್ಷಣೆಯಾಗಲಿವೆ.

ಕಾರ್ಯಕ್ರಮದಲ್ಲಿ ಹೊಸ ಕಲೆಕ್ಷನ್‌ಗಳ ವಿಶೇಷ ಪ್ರದರ್ಶನ, ಮನರಂಜನಾ ಕಾರ್ಯಕ್ರಮಗಳು, ಲೈವ್ ಸಂಗೀತ ಹಾಗೂ ಜೆಕೋಡ್ಸ್ ತಂಡದ ಪರಿಚಯ ಸೇರಿದಂತೆ ವಿವಿಧ ಚಟುವಟಿಕೆಗಳು ನಡೆಯಲಿವೆ.

ಫ್ಯಾಷನ್‌, ಆತ್ಮವಿಶ್ವಾಸ ಮತ್ತು ವೈಯಕ್ತಿಕ ಅಭಿವ್ಯಕ್ತಿಯನ್ನು ಸಂಭ್ರಮಿಸುವ ಈ ಕಾರ್ಯಕ್ರಮವು ಉಡುಪಿಯ ಫ್ಯಾಷನ್ ಪ್ರಿಯರಿಗೆ ಹೊಸ ಅನುಭವ ನೀಡಲಿದೆ

Leave a Reply

Your email address will not be published. Required fields are marked *