×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪೂರ್ಣಿಮಾ ಜನಾರ್ದನ್ ಅವರ ” ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಫಿಲಾಟಲಿ ಪಯಣ” ಅಂಚೆ ಚೀಟಿ ಪ್ರದರ್ಶನ ಉದ್ಘಾಟನೆ

ಭಾರತೀಯ ಅಂಚೆ ಉಡುಪಿ ಅಂಚೆ ವಿಭಾಗ, ಉಡುಪ ರತ್ನ ಪ್ರತಿಷ್ಠಾನ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಇದರ ಸಹಯೋಗದೊಂದಿಗೆ ಬನ್ನಂಜೆ ಉಪ ಅಂಚೆ ಕಚೇರಿಯ ಅಂಚೆ ಪಾಲಕಿ ಪೂರ್ಣಿಮಾ ಜನಾದ೯ನ್ ಅವರ “ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಫಿ ಲಾಟಲಿ ಪಯಣ” ಅಂಚೆ ಚೀಟಿ ಪ್ರದರ್ಶನ ಕಾರ್ಯಕ್ರಮ ಭಾಮಾ ಫಿಲಾಟಲಿ ಗ್ಯಾಲರಿ ಕೊಡವೂರಿನಲ್ಲಿ ಅ 21 ರಂದು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ ಅಂಚೆ ವಿಭಾಗವು ಆಧುನಿಕ ಜಾಲತಾಣದ ಈ ಯುಗದಲ್ಲೂ ವಿವಿಧ ರೀತಿಯ ಹೊಸ ಆಯಾಮಗಳಿಗೆ ತೆರೆದುಕೊಂಡು ಜನಸ್ನೇಹಿ ಇಲಾಖೆಯಾಗಿ ಗುರುತಿಸಿಕೊಂಡಿದೆ.ಯುವ ಜನಾಂಗಕ್ಕೆ ಅಂಚೆ ಸೇವೆಗಳನ್ನು ಪರಿಚಯ ಹಾಗೂ ಫಿಲಾಟೆಲಿ ವಿಷಯದ ಅರಿವು ಮೂಡಿಸುವ ಸಲುವಾಗಿ ಫಿಲಾಟೆಲಿ ಪಾಸ್ ಪೋರ್ಟ್ ನ್ನು ಪರಿಚಯಿಸಿದ್ದೆ ಅಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಅಂಚೆ ಇಲಾಖೆಯ ಇತರ ಸೇವೆಗಳ ಬಗ್ಗೆ ಸೂಕ್ತ ಪ್ರಚಾರ ನಡೆಸಲಾಗುತಿದೆ ಎಂದ ಅವರು, ಅಂಚೆ ಚೀಟಿ ಸಂಗ್ರಹಣ ಹವ್ಯಾಸವು “ಹವ್ಯಾಸಗಳ ರಾಜ” ಎಂದು ಕರೆಸಲ್ಪಡುತ್ತದೆ.ಉತ್ತಮ ಹವ್ಯಾಸಗಳು ನಮ್ಮನ್ನು ಎತ್ತರಕ್ಕೆ ಏರಿಸಲು ಸಹಕಾರಿ ಎಂದರು.

ಮುಖ್ಯ ಅತಿಥಿ ಕೆಎಂಸಿ ಮಣಿಪಾಲದ ಎಲುಬು ಮತ್ತು ಮೂಳೆ ರೋಗ ವಿಭಾಗ ತಜ್ಞ ಹಾಗೂ ಮುಖ್ಯಸ್ಥ ಮತ್ತು ಮಣಿಪಾಲ ಫಿಲಾಟಲಿ ಮತ್ತು ನ್ಯೂಮಿಸ್ ಮ್ಯಾಟಿಕ್ ಕ್ಲಬ್ ( ಎಮ್ ಪಿ ನ್ ಸಿ ) ಅಧ್ಯಕ್ಷ ಡಾ. ಕಿರಣ್ ಆಚಾರ್ಯ ಮಾತನಾಡಿ, ಅಂಚೆ ಚೀಟಿ ಸಂಗ್ರಹಣ ಹವ್ಯಾಸವು ನಮ್ಮ ಆರೋಗ್ಯವನ್ನು ಉತ್ತಮವಾಗಿ ಇರಿಸಲು ಸಹಕಾರಿ ಅದರಲ್ಲಿಯೂ ಕೂಡ ಅಲ್ಜೀಮರ್ ನಂತಹ ಕಾಯಿಲೆಗಳು ಬರದಂತೆ ತಡೆಯಲು ಸಾಧ್ಯ, ನಾವೆಲ್ಲರೂ ಕೂಡ ಒಂದಲ್ಲ ಒಂದು ಹವ್ಯಾಸವನ್ನು ಬೆಳೆಸಿಕೊಂಡರೆ ನಮ್ಮ ಬದುಕನ್ನು ಉತ್ತಮವಾಗಿ ಬದುಕಬಹುದು ಎಂದರು.

ಈ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು.ಇನ್ನೊರ್ವ ಅತಿಥಿ​ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ ಮಾತನಾಡುತ್ತ ಪೂರ್ಣಿಮಾ ಮತ್ತು ಜನಾದ೯ನ್ ಕೊಡವೂರು ಉಡುಪಿ ಜಿಲ್ಲೆಯ ಆಸ್ತಿಯಾಗಿದ್ದಾರೆ.​ ಯಾವುದೇ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯಲು ಇವರ ಸಹಕಾರ ಅತ್ಯಗತ್ಯ ಅವರಿಗೆ ಶುಭವಾಗಲಿ ಎಂದು ಆಶಿಸಿದರು .​

ಕೊಡವೂರು ಶಂಕರ ನಾರಾಯಣ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಮತ್ತು ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಮಂಜುನಾಥ್ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.​ ಈ ಕಾರ್ಯಕ್ರಮದಲ್ಲಿ ಖ್ಯಾತ ಅಂಚೆ ಚೀಟಿ ಸಂಗ್ರಾಹಕ ಅಮ್ಮುಂಜೆ ನಾಗೇಂದ್ರ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪೂರ್ಣಿಮಾ ಜನಾದ೯ನ್ ಮತ್ತು ಜನಾದ೯ನ್ ಕೊಡವೂರು ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗೌರವಿಸಲಾಯಿತು.

ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಚಂದ್ರ ನಾಯ್ಕ್ ಹಾಗೂ ಕಸಾಪ ಉಡುಪಿ ತಾಲೂಕು ಪದಾಧಿಕಾರಿಗಳಾದ ರಂಜನಿ ವಸಂತ್, ಸತೀಶ್ ಕೊಡವೂರು, ಆರ್ ವಸಂತ್ ಕೊಡವೂರು ಬ್ರಾಹ್ಮಣ ಮಹಾಸಭಾ ಸದಸ್ಯರು ಉಪಸ್ಥಿತಿತರಿದ್ದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು.​ ಜನಾದ೯ನ್ ಕೊಡವೂರು ಸ್ವಾಗತಿಸಿದರು.​ ಸಾಹಿತಿ ಡಾ.ಕಾತ್ಯಾಯನಿ ಕುಂಜಿಬೆಟ್ಟು ರಂಗ ಗೀತೆ ಹಾಡಿದರು. ಅಂಚೆ ಚೀಟಿ ಸಂಗ್ರಾಹಕಿ ಪೂರ್ಣಿಮಾ ಜನಾರ್ದನ್

Leave a Reply

Your email address will not be published. Required fields are marked *