×
Our website is made possible by displaying online advertisements to our visitors. Please consider supporting us by whitelisting our website.
  • 9880645340

ದಂಡತೀರ್ಥ: ಪ್ರತಿಭಾನ್ವೇಷಣ ಕಾರ್ಯಕ್ರಮ

ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಕಾಲೇಜ್ ವಿದ್ಯಾರ್ಥಿಗಳ ಪ್ರತಿಭಾನ್ವೇಷಣ ಕಾರ್ಯಕ್ರಮವು ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಬಳಿಕ ಮಾತನಾಡಿ,ಇಂತಹ ವೇದಿಕೆ ಸಿಕ್ಕಾಗ ತಮ್ಮಲ್ಲಿರುವ ಪ್ರತಿಭೆ ಅರಳುತ್ತದೆ,ಹಾಗೂ ಇದು ಬದುಕಿನುದ್ದಕ್ಕೂ ಸಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿ ರಂಗಭೂಮಿ ಕಲಾವಿದ, ಚಲನಚಿತ್ರನಟ ಮೆರ್ವಿನ್ ಶಿರ್ವ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಪ್ರತಿಭೆ ಎನ್ನುವುದು ಪ್ರತಿಯೊಬ್ಬರಲ್ಲೂ ಇದೆ ,ಅದಕ್ಕೆ ಅವಕಾಶ ಸಿಕ್ಕಾಗ ಸದುಪಯೋಗ ಪಡಿಸಿಕೊಳ್ಳಿಒಂದುವೇಳೆ ಹಿಂದೆ ಸರಿದರೆ ಅದು ಬೇರೆಯವರ ಪಾಲಾಗುತ್ತದೆ.ಹಾಗೂ ನೀವು ರಂಗಭೂಮಿ ಕಲಾವಿದರಾಗಬೇಕಾದರೆ ಮೊದಲು ಕನ್ನಡಿ ಮುಂದೆ ನಿಂತು ಅಭಿನಯಿಸುವುದನ್ನು ಕಲಿಯಿರಿ ಮತ್ತು ಅದನ್ನು ವಿದ್ಯಾರ್ಥಿ ಜೀವನದಲ್ಲೇ ಬೆಳೆಸಿ ಹಾಗೂ ಅದಕ್ಕೆ ಶಿಕ್ಷಕರು ಒಳ್ಳೆಯ ಮಾರ್ಗದರ್ಶನ ನೀಡುತ್ತಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಪ್ರಾಂಶುಪಾಲ ನೀಲಾನಂದ ನಾಯ್ಕ್,ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್ ವಿದ್ಯಾರ್ಥಿ ನಾಯಕಿ ನಿಶಾ ಕುಂದರ್,ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಧನುಷ್ ಸ್ವಾಗತಿಸಿ, ಶಮಿಕ್ ವೈ ಆಳ್ವ ಧನ್ಯವಾದ ನೀಡಿದರೆ ಮುಬಾಸ್ಸಿರ್ ಮತ್ತು ವಿಶಾಲ್ ನಿರೂಪಿಸಿದರು. ಪ್ರಥಮ್, ಆಕಿಬ್, ಸುಹೈಲ್,ಹಾಗೂ ಚಮನ್ ಕಾರ್ಯಕ್ರಮಗಳನ್ನು ಸಂಘಟಿಸಿದರು.

Leave a Reply

Your email address will not be published. Required fields are marked *