ಪಡುಬಿದ್ರಿಯ ಮುಖ್ಯ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡಿರುವ ‘Lite Eatz – The Cake Shop’ ಮಳಿಗೆಗೆ ಅದ್ದೂರಿ ಚಾಲನೆ ದೊರೆತಿದೆ. ಸ್ಥಳೀಯ ಗಣ್ಯರು ಹಾಗೂ ಬಂಧು-ಮಿತ್ರರ ಸಮ್ಮುಖದಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ಶುಭಾರಂಭ ಮಾಡಲಾಯಿತು.
ಆಗಸ್ಟ್ 19ರಂದು ಪಡುಬಿದ್ರಿಯಲ್ಲಿ ರೆಬಿತಾ ವಿಜಯ ಕುಮಾರ್ ಶೆಟ್ಟಿ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿ, ಸಂಸ್ಥೆಗೆ ಶುಭ ಹಾರೈಸಿದರು.
ಗ್ರಾಹಕರಿಗಾಗಿ ಪ್ರತಿದಿನ ತಾಜಾ ಕೇಕ್‌ಗಳು, ವಿವಿಧ ಬಗೆಯ ಬೇಕ್ಸ್, ಸೇವರೀಸ್, ಕೆಫೆ ಫೇವರಿಟ್ಸ್ ಸೇರಿದಂತೆ ವೈವಿಧ್ಯಮಯ ಆಹಾರ ಪದಾರ್ಥಗಳು ಇಲ್ಲಿ ಲಭ್ಯವಾಗಲಿವೆ.
ಈಗಾಗಲೇ 30ಕ್ಕೂ ಅಧಿಕ ಸ್ಥಳಗಳಲ್ಲಿ ಮಳಿಗೆಗಳನ್ನು ಹೊಂದಿರುವ Lite Eatz, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಆಗಸ್ಟ್ 20ರಂದು ಅಜೆಕಾರು ಮತ್ತು ಕಾವೂರಿನಲ್ಲಿ, ಆಗಸ್ಟ್ 21ರಂದು ವಾಮಂಜೂರು ಹಾಗೂ ಮಲ್ಲಿಕಟ್ಟೆಯಲ್ಲಿ ನೂತನ ಮಳಿಗೆಗಳು ಆರಂಭಗೊಳ್ಳಲಿವೆ.

ಮುಂದಿನ ದಿನಗಳಲ್ಲಿ ದೇರಳಕಟ್ಟೆ, ನ್ಯೂ ಚಿತ್ರ ಕಾರ್ ಸ್ಟ್ರೀಟ್, ಮೂಡುಬಿದಿರೆ, ಸಾಲಿಗ್ರಾಮ, ಬ್ರಹ್ಮಾವರ, ಉಡುಪಿ, ಹೆಬ್ರಿ ಹಾಗೂ ಬೆಳ್ಮಣ್ ಸೇರಿದಂತೆ ಹಲವು ಪ್ರದೇಶಗಳಲ್ಲಿ Lite Eatz ಮಳಿಗೆಗಳು ಆರಂಭಗೊಳ್ಳಲಿವೆ.
ತಾಜಾ ಕೇಕ್‌ಗಳು, ರುಚಿಕರ ಬೇಕ್ಸ್ ಹಾಗೂ ಕೆಫೆ ಫೇವರಿಟ್ಸ್‌ಗಳೊಂದಿಗೆ ಗ್ರಾಹಕರಿಗೆ ಹೊಸ ರುಚಿಯ ಅನುಭವ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಪಾಲುದಾರ ಉದಯ ಕುಮಾರ್ ಶೆಟ್ಟಿ ಹೇಳಿದರು.
ಸಂಸ್ಥೆಯ ಪಾಲುದಾರ ಸಿ.ಎ. ಸತೀಶ್ ಶೆಟ್ಟಿ ಮಾತನಾಡಿ, ಪಡುಬಿದ್ರಿ ಜನತೆಗೆ ಹೊಸ ರುಚಿಯ ವಿವಿಧ ಬಗೆಯ ಕೇಕ್‌ಗಳು ಹಾಗೂ ಬೇಕರಿ ಉತ್ಪನ್ನಗಳನ್ನು ಯೋಗ್ಯ ಬೆಲೆಯಲ್ಲಿ ಒದಗಿಸುವ ಮೂಲಕ ಎಲ್ಲರೂ ಸವಿಯುವಂತಾಗಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಜಯ ಶೆಟ್ಟಿ (ಹೋಟೆಲ್ ಸುಧಾಮ, ಗೋರೆಗಾಂವ್), ರೆಬಿತಾ ಶೆಟ್ಟಿ, ಶಿಬಿನ್ ಶೆಟ್ಟಿ, ಸಿ.ಎ. ಸತೀಶ್ ಶೆಟ್ಟಿ, ಉದಯ ಶೆಟ್ಟಿ, ಮ್ಯಾನೇಜಿಂಗ್ ಡೈರೆಕ್ಟರ್ ಗುಣಪಾಲ ಶೆಟ್ಟಿ, ಪ್ರೊಡಕ್ಷನ್ ಡೈರೆಕ್ಟರ್ ಸಂಜೀವ ಶೆಟ್ಟಿ, ಸಚಿನ್ ಸಾಲ್ಯಾನ್ ಹಾಗೂ ನವದುರ್ಗಾ ಫುಡ್ ಪ್ರಾಡಕ್ಟ್ಸ್‌ನ ನಿರ್ದೇಶಕರು ಉಪಸ್ಥಿತರಿದ್ದರು.

