×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಯುವಜನರು ಮತ್ತು ಕೃಷಿ ಬಂಧುಗಳಿಗೆ ಸುವರ್ಣಾವಕಾಶಉಚಿತ ಕೃಷಿ ಉದ್ಯಮಿ – ಕೋಳಿ ಸಾಕಾಣಿಕೆ ತರಬೇತಿ

ಸ್ವಂತ ಉದ್ಯಮ ಆರಂಭಿಸುವ ಕನಸಿರುವ ಯುವಜನರಿಗೆ ಹಾಗೂ ಕೃಷಿಯಲ್ಲಿ ಹೊಸ ಆದಾಯ ಮಾರ್ಗ ಹುಡುಕುತ್ತಿರುವ ಕೃಷಿ ಬಂಧುಗಳಿಗೆ ಇದೀಗ ಉತ್ತಮ ಅವಕಾಶ ಒದಗಿ ಬಂದಿದೆ.
ಭಾರತ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಮಾನ್ಯತೆ ಪಡೆದ, ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯ ಅವರ ಅಧ್ಯಕ್ಷತೆಯಲ್ಲಿ, ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 2026ರ ಜೂನ್ 01ರಿಂದ ಜೂನ್ 13ರವರೆಗೆ 13 ದಿನಗಳ “ಕೃಷಿ ಉದ್ಯಮಿ – ಕೋಳಿ ಸಾಕಾಣಿಕೆ” ಸಂಪೂರ್ಣ ಉಚಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ತರಬೇತಿಯಲ್ಲಿ ಆಧುನಿಕ ಕೋಳಿ ಸಾಕಾಣಿಕೆ ವಿಧಾನಗಳು, ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸುವ ತಂತ್ರಗಳು, ಮಾರುಕಟ್ಟೆ ವ್ಯವಸ್ಥೆ, ಬ್ಯಾಂಕ್ ಸಾಲ ಹಾಗೂ ಸ್ವಯಂ ಉದ್ಯೋಗ ಅವಕಾಶಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಗುತ್ತದೆ.
👥 ಅರ್ಹತೆ: ✔️ 18 ರಿಂದ 50 ವರ್ಷದೊಳಗಿನವರು
✔️ ಕನ್ನಡ ಓದು–ಬರಹ ತಿಳಿದಿರುವವರು
✔️ ಕೃಷಿ ಮತ್ತು ಸ್ವಉದ್ಯೋಗದಲ್ಲಿ ಆಸಕ್ತಿ ಇರುವವರು
🍛 ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುವುದು.
📍 ತರಬೇತಿ ಸ್ಥಳ: ಸಿದ್ಧವನ, ಉಜಿರೆ
📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
6364561982 / 8296770307 / 9980885900
9448348569 / 8861514706 / 9591044014 / 9902594791
☎️ 08256-236404

Leave a Reply

Your email address will not be published. Required fields are marked *