×
Our website is made possible by displaying online advertisements to our visitors. Please consider supporting us by whitelisting our website.
  • 9880645340

21 ಮೇ ಮನೆಗೊಂದು ಗ್ರಂಥಾಲಯ ವಿನೂತನ ಕಾರ್ಯಕ್ರಮ ಉಡುಪಿಯ ಟೆಂಪಲ್ ಇನ್ ಹೋಂಸ್ಟೇಯಲ್ಲಿ ಉದ್ಘಾಟನೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಇದರ ವತಿಯಿಂದ ಪುಸ್ತಕ ಪ್ರಾಧಿಕಾರ ಇದರ ಮನೆಗೊಂದು ಗ್ರಂಥಾಲಯ ವಿನೂತನ ಕಾರ್ಯಕ್ರಮ ಉಡುಪಿಯ ಟೆಂಪಲ್ ಇನ್ ಹೋಂಸ್ಟೇಯಲ್ಲಿ ಇದೇ ಬರುವ 21 ಮೇ ಗುರುವಾರ ಸಂಜೆ ಐದು 15ಕ್ಕೆ ಉದ್ಘಾಟನೆಗೊಳ್ಳಲಿದೆ.

ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿರುವ ಡಾ. ಮಾನಸ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು,
ಸಭಾಧ್ಯಕ್ಷತೆಯನ್ನು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್ ಪಿ ವಹಿಸಲಿದ್ದಾರೆ. ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ ಹಾಗೂ ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ ಎಕ್ಕಾರ್ ಹಾಗೂ ಅಪ್ನಾ ಹಾಲಿಡೇಸ್ ಇದರ ಆಡಳಿತ ನಿರ್ದೇಶಕ ನಾಗರಾಜ್ ಹೆಬ್ಬಾರ್ ಉಪಸ್ಥಿತರಿರುತ್ತಾರೆ.

ಇದೇ ಸಮಯ ಸಂದರ್ಭದಲ್ಲಿ ಪುಸ್ತಕ ಮನೆಗಳ ಭೇಟಿ ಕಾರ್ಯಕ್ರಮವಿರುತ್ತದೆ ಎಂದು ಕ ಸಾ ಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *