ರಾಜ್ಯದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಎರಡೂ ಕ್ಷೇತ್ರಗಳಲ್ಲಿ ಹಾಗೂ ಕೇರಳ ರಾಜ್ಯದಲ್ಲಿಯೂ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಸಾಧಿಸಿದ ಹಿನ್ನಲೆಯಲ್ಲಿ, ಕಾಪು ಪೇಟೆಯಲ್ಲಿ ಇಂದು ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ವಿಜೃಂಭಣೆಯ ವಿಜಯೋತ್ಸವವನ್ನು ಆಚರಿಸಲಾಯಿತು.
ಈ ಸಂಭ್ರಮಾಚರಣೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೈ. ಸುಕುಮಾರ್ ಅವರು ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿ, ಪಕ್ಷದ ವಿಜಯದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖ ನಾಯಕರುಗಳಾದ
ಶರ್ಫುದ್ದೀನ್ ಶೇಖ್, ನಿಯಾಜ್ ಪಡುಬಿದ್ರಿ, ಉಸ್ಮಾನ್ ಕೊಪ್ಪಲಂಗಡಿ, ಸುಧೀರ್ ಕುಮಾರ್, ರಮೀಝ್ ಹುಸೈನ್, ಸುಧೀರ್ ಕರ್ಕೆರ, ಶಾಂತಲತಾ ಶೆಟ್ಚಿ, ಸುಚರಿತಾ, ಆಶಾ ಅಂಚನ್, ದೀಪಕ್ ಕುಮಾರ್, ಆಶೋಕ್ ನಾಯರಿ, ಶಾಫಿ ಪಡುಬಿದ್ರಿ, ಮನ್ಸೂರ್, ಬಾಬಣ್ಣ, ಸಾದಿಕ್ ದೀನಾರ್, ನಸೀರ್ ಕಾಪು, ಜ್ಯೋತಿ ಮೆನನ್ ಸೇರಿದಂತೆ ಅನೇಕ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

