×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕೇಂದ್ರ ಸರಕಾರದ 4 ಲೇಬರ್ ಕೋಡ್ ವಿರೋಧಿಸಿ ರಾಜ್ಯ ಸರಕಾರ ಮತ್ತು ಕಾರ್ಮಿಕ ಸಚಿವಾಲಯಕ್ಕೆ ಅಕ್ಷೇಪಣೆ ಪತ್ರ ಸಲ್ಲಿಕೆ—- ಸಿಐಟಿಯು

ಸೆಂಟರ್ ಆಫ್ ಇಂಡಿಯನ್ ಟ್ಏಡ್ ಯೂನಿಯನ್ (ಸಿಐಟಿಯು) ನೇತ್ರತ್ವದಲ್ಲಿ ಇಂದು ರಾಜ್ಯಾದ್ಯಂತ ಕೇಂದ್ರ ಸರಕಾರ ಜಾರಿ ಮಾಡಿರುವ 4 ಲೇಬರ್ ಕೋಡ್ ವಿರೋಧಿಸಿ ಮತ್ತು ರಾಜ್ಯ ಸರಕಾರದ ಕರಡು ನಿಯಮಗಳು 2026 ಕುರಿತು ಕಾರ್ಮಿಕ ಸಂಘಗಳ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಇಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ನೀಡಲು ಸಿಐಟಿಯು ಕರಯಂತೆ ಕಾರ್ಕಳದಲ್ಲಿ ಕಾರ್ಮಿಕ ನಿರೀಕ್ಷಕರಾದ ನವೀನ್ ರವರ ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಕಾರ್ಯದರ್ಶಿ (ವಿಕಾಸ ಸೌಧ) ಇವರಿಗೆ ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಘ(ರಿ) ಮತ್ತು ಲೆಮಿನಾ ಫೌಂಡ್ರಿಸ್ ಕಾರ್ಮಿಕರ ಸಂಘ (ರಿ)ಆಕ್ಷೇಪಣೆ ಪತ್ರವನ್ನು ನೀಡಲಾಯಿತು

ಪ್ರಮುಖ ಅಂಶಗಳು
1.ಕಾರ್ಮಿಕ ಸಂಹಿತೆಗಳನ್ನು ರದ್ದು ಪಡಿಸಬೇಕು.
2.ಒಕ್ಕೂಟ ವ್ಯವಸ್ಥೆ ವಿರುದ್ಧವಾದ ಸಮವರ್ತಿ ಪಟ್ಟಿಯ ಕಾರ್ಮಿಕರ ಕುರಿತು ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ಸೀಮಿತ ಗೊಳಿಸುವ ಪ್ರಯತ್ನ ವನ್ನು ರಾಜ್ಯ ಸರಕಾರ ವಿರೋಧಿಸಬೇಕು.
3.ರಾಜ್ಯ ಸರಕಾರ ತನ್ನ ಅಧಿಕಾರವನ್ನು ಚಲಾಯಿಸಿ ಮೂಲ ಸಂಹಿತೆಗಳಿಗೆ ತಿದ್ದುಪಡಿಗಳನ್ನು ತಂದು ನಂತರ ನಿಯಾಮವಳಿ ರೂಪಿಸಬೇಕು.
4.ಕರಡು ನಿಯಮಾವಳಿಗಳನ್ನು ಕನ್ನಡದಲ್ಲಿ ಪ್ರಕಟಿಸಿ ನಂತರ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ನೀಡಬೇಕು.
5.ರಾಜ್ಯ ಸರ್ಕಾರ ಕೂಡಲೇ ಕನಿಷ್ಟ ವೇತನ ಅಧಿಸೂಚನೆ ಹೊರಡಿಬೇಕು.
ಪ್ರತಿಭಟನೆಯಲ್ಲಿ ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್ ಕಾಂಚನ್, ಬೀಡಿ ಮುಖಂಡರಾದ ಜಯಂತಿ, ಶಕುಂತಲಾ ಲೆಮಿನಾ ಫೌಂಡ್ರಿಸ್ ಕಾರ್ಮಿಕ ಸಂಘದ ಅಧ್ಯಕ್ಷರಾದ ಮೋಹನ್ ಚಂದ್ರ,ಪ್ರಧಾನ ಕಾರ್ಯದರ್ಶಿ ನಾಗೇಶ್ ,ಕಾರ್ಕಳ ಕಟ್ಟಡ ಸಂಘದ ಮುಖಂಡರಾದ ಪುಷ್ಪ, ನಾಗೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *