ಫೆಬ್ರವರಿ 11 ಮಂಗಳವಾರದಂದು ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯ ಅಲ್ ಸುಹೇಮಿ ಸಭಾಂಗಣದಲ್ಲಿ ಶಿಕ್ಷಕ–ರಕ್ಷಕ ಸಭೆ ಹಾಗೂ ಪೂರ್ವ ಪ್ರಾಥಮಿಕ ಮಕ್ಕಳ TIBYAN ಎಕ್ಸ್‌ಪೋ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ವಿವಿಧ ಕಲಾ ಪ್ರದರ್ಶನಗಳನ್ನು ವೀಕ್ಷಿಸಿದರು. ಮಕ್ಕಳು ಚಿತ್ರಕಲೆ, ಕ್ರಾಫ್ಟ್, ಕೈಚಳಕ ವಸ್ತುಗಳು ಹಾಗೂ ವಿವಿಧ ಶೈಕ್ಷಣಿಕ ಚಟುವಟಿಕೆಗಳ ಮೂಲಕ ತಮ್ಮ ಪ್ರತಿಭೆಯನ್ನು ಆತ್ಮವಿಶ್ವಾಸದಿಂದ ಪ್ರದರ್ಶಿಸಿದರು. ಪೋಷಕರು ಮಕ್ಕಳ ಪ್ರದರ್ಶನವನ್ನು ಮೆಚ್ಚಿ ಪ್ರಶಂಸಿಸಿದರು. ಸಮಾರಂಭಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಫೀಕ್ ಮಾಸ್ಟರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪೋಷಕರು ತಮ್ಮ ಮಕ್ಕಳಿಗೆ ಧಾರ್ಮಿಕ, ಲೌಕಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕೆಂದು ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಖೈರುನ್ನಿಸ ಅವರು ಮಕ್ಕಳನ್ನು ಅಭಿನಂದಿಸಿ, ಶಿಕ್ಷಕರ ಶ್ರಮ ಮತ್ತು ಮಾರ್ಗದರ್ಶನವನ್ನು ಪ್ರಶಂಸಿಸಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಖಾಲಿದ್ ಮುಹಮ್ಮದ್, ಉಪಾಧ್ಯಕ್ಷರಾದ ಉಮರ್ ಇಸ್ಮಾಯಿಲ್, ಶಾಲಾ ಧರ್ಮಗುರುಗಳಾದ ಮೌಲಾನಾ ಉಬೇದುರ್ರಹ್ಮಾನ್ ಹಾಗೂ ಮುಖ್ಯ ಶಿಕ್ಷಕಿ ಶ್ರೀಮತಿ ಖೈರುನ್ನಿಸ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಶ್ರೀಮತಿ ಶಬಾನಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿ ಶಿಫಾ ಅವರು ಮಕ್ಕಳ ವಿವಿಧ ಚಟುವಟಿಕೆಗಳನ್ನು ದೃಶ್ಯ ಮಾಧ್ಯಮದ ಮೂಲಕ ಪೋಷಕರಿಗೆ ಪರಿಚಯಿಸಿದರು.ಸಹ ಶಿಕ್ಷಕಿ ಶ್ರೀಮತಿ ಅಪ್ಸಾ ಪರ್ವೀನ್ ಕಾರ್ಯಕ್ರಮ ನಿರೂಪಿಸಿದರು ಹಾಗೂ
ಸಹ ಶಿಕ್ಷಕಿ ಶ್ರೀಮತಿ ವಿಜೇತಾ ಅವರು ಎಲ್ಲಾ ಪೋಷಕರು ಹಾಗೂ ಅತಿಥಿಗಳಿಗೆ ಧನ್ಯವಾದಗೈದರು.

