×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಲಚ್ಚಿಲ್ ನಾಗೇಶ್ ಬಂಗೇರ ಉಚ್ಚಿಲ ಅವರಿಗೆ ಅರಸು ಪ್ರಶಸ್ತಿ

ಪಡುಬಿದ್ರಿ : ಬ್ಯಾಂಕ್ ಆಫ್ ಇಂಡಿಯಾ ಎಂಪ್ಲಾರ‍್ಸ್ ಯೂನಿಯನ್ ಇದರ ಕರ್ನಾಟಕ ವಲಯದ ಅಧ್ಯಕ್ಷರಾಗಿ ಸುದೀರ್ಘ ಅವಽಯಲ್ಲಿ ಸೇವೆಯನ್ನು ಸಲ್ಲಿಸಿದ್ದ, ಉಚ್ಚಿಲ ಶ್ರೀ ಮಹಾಲಕ್ಷಿ÷್ಮ ಆಂಗ್ಲಮಾಧ್ಯಮ ಶಾಲೆ, ಲಚ್ಚಿಲ್ ವಿದ್ಯಾಪ್ರಸಾರ ಸಮಿತಿಯಲ್ಲಿ ತೊಡಗಿಸಿಕೊಂಡು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಸೇವಕರಾಗಿ ಗುರುತಿಸಿಕೊಂಡಿರುವ ಲಚ್ಚಿಲ್ ನಾಗೇಶ್ ಡಿ. ಬಂಗೇರ ಉಚ್ಚಿಲ ಅವರನ್ನು ಮೂಲ್ಕಿ ಸೀಮೆ ಅರಸರ ಅರಮನೆಯಲ್ಲಿ ಅರಸು ಪ್ರಶಸ್ತಿ ೨೦೨೫ನ್ನು ಪ್ರಧಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಅರಸು ದುಗ್ಗಣ್ಣ ಸಾವಂತರು, ಮಾಜಿ ಸಚಿವ ಅಭಯಚಂದ್ರ ಜೈನ್, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಡಾ. ಅಮರಶ್ರೀ ಶೆಟ್ಟಿ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಲೀಲಾಕ್ಷ ಕರ್ಕೇರ, ಬಾಹುಬಲಿ ಪ್ರಸಾದ್, ಗೌತಮ್ ಜೈನ್, ವಸಂತ್ ಬೆರ್ನಾರ್ಡ್, ಉದ್ಯಮಿ ಕನ್ಯಾನ ಸದಾಶಿವ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *