ಪಡುಕುತ್ಯಾರು: ಪಡುಕುತ್ಯಾರಿನ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಡಿ.18, 19 , 20ರಂದು ಸಂಜೆ 5 ಘಂಟೆ ಯಿಂದ 7.30ರ ವರೇಗೆ ಸಾರ್ವಜನಿಕವಾಗಿ ಸಾಮೂಹಿಕ ಶನೀಶ್ವರ ಪೂಜೆ ನಡೆಯಲಿದೆ.
ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು
ಸರ್ವರ ಅರಿಷ್ಟ ನಿವಾರಣೆಯೊಂದಿಗೆ ಲೋಕಲ್ಯಾಣವಾಗಬೇಕು ಎಂಬ ಸಂಕಲ್ಪದಂತೆ ಈ ವಿರಳ ಮತ್ತು ವಿಶಿಷ್ಟವಾದ ಕಾರ್ಯಕ್ರಮವನ್ನು ಶ್ರೀಗಳವರ ಮಾರ್ಗದರ್ಶನ ಹಾಗೂ ದಿವ್ಯ ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಹಾಸಂಸ್ಥಾನದ ಶ್ರೀ ಸರಸ್ವತೀ ಪೂರ್ವ ಛಾತ್ರ ಸಂಘ ಹಾಗೂ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನವು ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಕಾರ್ಯಕ್ರಮ ಯಶಸ್ವಿಗಾಗಿ ಸಂಯೋಜನಾ ಸಮಿತಿಯಲ್ಲಿ ಪ್ರಧಾನ ಸಂಯೋಜಕರಾಗಿ ಕಾಪು ವಿಧಾನ ಸಭಾ ಕ್ಷೇತ್ರ ಶಾಸಕರಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆ , ಸಂಯೋಜಕರಾಗಿ ಶ್ರೀ ಜನಾರ್ದನ ಆಚಾರ್ಯ ಕುತ್ಯಾರು ಅಧ್ಯಕ್ಷರು ಕುತ್ಯಾರು ಗ್ರಾಮ ಪಂಚಾಯತ್ ,ಶ್ರೀ ನವೀನ್ ಶೆಟ್ಟಿ ಕುತ್ಯಾರು, ಶ್ರೀ ಪ್ರಸಾದ್ ಶೆಟ್ಟಿ ಕುತ್ಯಾರು, ಶ್ರೀ ಸತೀಶ್ ಕುತ್ಯಾರು, ಶ್ರೀಮತಿ ಶಿಲ್ಪಾ ಜಿ ಸುವರ್ಣ, ಶ್ರೀಮತಿ ಗೀತಾಂಜಲಿ ಸುವರ್ಣ, ಶ್ರೀಮತಿ ಲತಾ ಎಸ್ ಆಚಾರ್ಯ ಕುತ್ಯಾರು, ಶ್ರೀ ಪ್ರಸಾದ್ ಶೆಟ್ಟಿ ವಳದೂರು, ಶ್ರೀಮತಿ ಉಷಾ ಎಲ್ಲೂರು, ಶ್ರೀ ಗುರುಪ್ರಸಾದ್ ಉಚ್ಚಿಲ, ಶ್ರೀ ಅರುಣ್ ಶೆಟ್ಟಿ ಪಾದೂರು ವಿವಿಧ ವಲಯಗಳಲ್ಲಿ ಶ್ರೀಮತಿ ಜಯಲಕ್ಷ್ಮೀ ಆಳ್ವ (ಪಾದೂರು), ಶ್ರೀ ದಿನೇಶ್ ದೇವಾಡಿಗ , ಶ್ರೀಮತಿ ಮಂಜುಳಾ ಆಚಾರ್ಯ (ಹೇರೂರು), ಶ್ರೀ ವಸಂತ ಆಚಾರ್ಯ, ಶ್ರೀಮತಿ ರಜನಿ ಆಚಾರ್ಯ (ಮಜೂರು), ಶ್ರೀ ಹರೀಶ್ ಆಚಾರ್ಯ, ಶ್ರೀಮತಿ ಶಾರದೇಶ್ವರಿ ಗುರ್ಮೆ (ಕಳತ್ತೂರು), ಶ್ರೀ ಧೀರಜ್ ಶೆಟ್ಟಿ, ಶ್ರೀಮತಿ ಸ್ವಪ್ನಾ ಪ್ರಕಾಶ್ ಆಚಾರ್ಯ (ಕುತ್ಯಾರು), ಶ್ರೀ ಹರಿಮಾಸ್ಟರ್, ಶ್ರೀಮತಿ ಮೋಹಿನಿ ಶೆಟ್ಟಿ (ಪಿಲಾರು), ಶ್ರೀ ಸಚಿನ್, ಶ್ರೀಮತಿ ಇಂದಿರಾ ಆಚಾರ್ಯ (ಸಾಂತೂರು), ಶ್ರೀ ಅನುದೀಪ್ , ಶ್ರೀ ಹರೀಶ್ ಆಚಾರ್ಯ (ಎಲ್ಲೂರು), ಶ್ರೀ ಗಣೇಶ್ ಆಚಾರ್ಯ, ಶ್ರೀ ಬಾಲಕೃಷ್ಣ ಆಚಾರ್ಯ (ಬೆಳಪು), ಶ್ರೀ ಶ್ರೀಕಾಂತ ಆಚಾರ್ಯ, ಶ್ರೀ ವಿಠಲ ಆಚಾರ್ಯ (ಕಾಪು) ನೇತೃತ್ವ ನೀಡುತ್ತಿದ್ದಾರೆ.
ಮಹಾ ಸಂಸ್ಥಾನದ ಬಿ.ಸೂರ್ಯ ಕುಮಾರ್ ಹಳೆಯಂಗಡಿ ಅಧ್ಯಕ್ಷರು ,ಆನೆಗುಂದಿ ಶ್ರೀ ಸರಸ್ವತೀ ಎಜ್ಯುಕೇಶನಲ್ ಟ್ರಸ್ಟ್ (ರಿ)(ಅಸೆಟ್), ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠ ಶಾಲೆ, ಪಡುಕುತ್ಯಾರು ಶ್ರೀ ಗಣೇಶ ಆಚಾರ್ಯ ಕೆಮ್ಮಣ್ಣು ಅಧ್ಯಕ್ಷರು , ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಪಡುಕುತ್ಯಾರು ಶ್ರೀ ಬೆಳುವಾಯಿ ಸುಂದರ ಆಚಾರ್ಯ ಮಂಗಳೂರು ಅಧ್ಯಕ್ಷರು ಆನೆಗುಂದಿ ಶ್ರೀ ಸರಸ್ವತೀ ಗೋವು – ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ (ರಿ), ಪಡುಕುತ್ಯಾರು. ಶ್ರೀಮತಿ ಸಂಧ್ಯಾಲಕ್ಷ್ಮಣ ಆಚಾರ್ಯ ಉಡುಪಿ
ಶ್ರೀ ಸರಸ್ವತೀ ಮಾತೃಮಂಡಳಿ ಪಡುಕುತ್ಯಾರು ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ.
ಶ್ರೀಗಳವರ ಮಾರ್ಗದರ್ಶನದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕವಾಗಿ ಕೋಟಿ ಕುಂಕುಮಾರ್ಚನೆ, ರಾಶಿ ಪೂಜೆ, ಆಶ್ಲೇಷ ಬಲಿ, ಶ್ರೀಚಕ್ರ ಪೂಜೆ,ದಶ ಸಹಸ್ರ ಮೋದಕ ಮಹಾಗಣಪತಿ ಯಾಗ, ಶಿವಾರ್ಚನೆ, ಪುರುಷೋತ್ತಮ ಯಾಗ, ದುರ್ಗಾ ನಮಸ್ಕಾರ ಪೂಜೆ ಮುಂತಾದ ಅನೇಕ ವೈದಿಕ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆದಿವೆ. ಪ್ರಸ್ತುತ ಕಾರ್ಯಕ್ರಮವು ಶನಿದೋಷ ನಿವಾರಣೆಗಾಗಿ ಮತ್ತು ಶನಿದೇವರ ಸಂಪೂರ್ಣ ಅನುಗ್ರಹವನ್ನು ಪಡೆಯಲು ನಡೆಯುವ ಅತ್ಯಂತ ವಿಶೇಷ ಹಾಗೂ ವಿರಳವಾದ ಕಾರ್ಯಕ್ರಮವಾಗಿದೆ.
ಸಾಯಂಕಾಲದ ಆರಾಧನೆಯಲ್ಲಿ ಮೊದಲು ಶನಿದೇವರ ಮಹಾತ್ಮೆಯನ್ನು ತಿಳಿಸಿಕೊಡಲಾಗುತ್ತದೆ. ನಂತರ, ಭಕ್ತರಸಂಕಲ್ಪದೊಂದಿಗೆ,ಸಾಮೂಹಿಕ ಶನಿ ಜಪ ಪಠಣ, ಶಾಸ್ತ್ರೋಕ್ತವಾಗಿ ಎಳ್ಳುಗಂಟು ದೀಪಾರಾಧನೆಯ ಮೂಲಕ ಶನಿಪೂಜೆಯನ್ನು ನೆರವೇರಿಸಲಾಗುತ್ತದೆ. ಕೊನೆಯಲ್ಲಿ, ಶನಿದೇವರ ಪ್ರಸಾದವನ್ನು ಶ್ರೀಗಳವರ ಅನುಗ್ರಹಪೂರ್ವಕ ಮಂತ್ರಾಕ್ಷೆಯೊಂದಿಗೆ ನೀಡಲಾಗುತ್ತದೆ.
ಸಮಸ್ತ ಭಕ್ತಾದಿಗಳು ಈ ಮಹೋನ್ನತ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ, ಶನಿದೇವರ ಕೃಪೆಗೆ, ಪೀಠಮಾತೆ ಸರಸ್ವತೀ ದೇವಿಯ ಆಶೀರ್ವಾದಕ್ಕೆ ಹಾಗೂ ಪರಮಪೂಜ್ಯ ಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಆನೆಗುಂದಿ ಅಧ್ಯಕ್ಷ ವಿ ಶ್ರೀಧರ ಆಚಾರ್ಯ ವಡೇರಹೋಬಳಿ,ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರು, ಕೋಶಾಧಿಕಾರಿ ಅರವಿಂದ ಆಚಾರ್ಯ ಬೆಳುವಾಯಿ ಹಾಗೂ ಶ್ರೀ ಸರಸ್ವತೀ ಪೂರ್ವ ಛಾತ್ರ ಸಂಘದ ಅಧ್ಯಕ್ಷ ಶ್ರೀ ಕೇಶವ ಶರ್ಮಾ ಇರುವೈಲು ಮನವಿ ಮಾಡಿದ್ದಾರೆ.

