×
Our website is made possible by displaying online advertisements to our visitors. Please consider supporting us by whitelisting our website.
  • 9880645340

ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರಿಗೆ ವೀರ ಕನ್ನಡತಿ ಪ್ರಶಸ್ತಿ

ಸರಕಾರ ನೀಡಿದ ಅವಕಾಶ ಮತ್ತು ತಾನು ಕಲಿತ ಶಿಕ್ಷಣ ವನ್ನು ದಕ್ಷ ತೆ ಯಿಂದ ಸಮಾಜ ಕ್ಕೆ ಕೊಟ್ಟಾಗ ದೊರೆತ ಗೌರವ ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರಿಗೆ ವೀರ ಕನ್ನಡತಿ ಪ್ರಶಸ್ತಿ ತಹಶಿಲ್ದಾರ ಡಾ.ಪ್ರತಿಭಾ.ಆರ್ ಅವರ ಅಪ್ರತಿಮ ಸೇವೆಗೆ ಒಲಿದು ಬಂದ “ವೀರ ಕನ್ನಡತಿ” ಪುರಸ್ಕಾರ

ಡಾ. ಪ್ರತಿಭಾ ಆರ್ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ತಹಶಿಲ್ದಾರ್, ದಂಡಾಧಿಕಾರಿ ಆಗಿದ್ದಾಗ ಮಾಡಿದ ಸೇವೆಯನ್ನು ಗುರುತಿಸಿ ‌ಝೀ ಟಿವಿ ವಾಹಿನಿಯವರು ರಾಜ್ಯ ಮಟ್ಟದ ಪ್ರಶಸ್ತಿಯಾದ “ವೀರ ಕನ್ನಡಿಗ” ಪ್ರಶಸ್ತಿ ನೀಡಿ ಗೌರವಿಸಿದೆ. ಉಡುಪಿಯ ಕಾಪು ವಿನಲ್ಲಿ ದಂಡಾಧಿಕಾರಿ/ತಹಶಿಲ್ದಾರ್ ಕರ್ತವ್ಯ ನಿರ್ವಹಿಸಿದ ಡಾ.ಪ್ರತಿಭಾ ಆರ್ ರವರು ತಮ್ಮ ವಿಶಿಷ್ಟ ಸೇವಾಪರತೆಯಿಂದ ಜನಮನ್ನಣೆ ಗಳಿಸಿದ್ದರು…

ತಾವೇ ಸ್ವತಃ ಬಸ್ ಹತ್ತಿ ಸಂಚರಿಸಿ ಸಾರಿಗೆ ಸಮಸ್ಯೆಗೆ ಪರಿಹಾರ ಎಷ್ಟೋ ವರ್ಷಗಳಿಂದ ಬೆಳಕು-ನೀರು- ಶೌಚಾಲಯ ಸೌಲಭ್ಯಗಳಿಲ್ಲದ ಕೆಳ ಸಮುದಾಯದವರ ಮನೆಗೆ ಮೂಲ ಭೂತ ಸೌಲಭ್ಯ ಒದಗಿಸಿರುತ್ತಾರೆ.‌ ಪ್ರವಾಹ ಉಂಟಾದಾಗ ಸ್ವತಃ ಬೋಟ್ ನಲ್ಲಿ ತೆರಳಿ ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಿಸಿರುತ್ತಾರೆ. ಅನಾಥ ವೃದ್ಧರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಆಶ್ರಯ ನೀಡಿರುತ್ತಾರ ದುರ್ಬಲರ ಮನೆಗೆ ತೆರಳಿ ಆಧಾರ್ ಮಾಡಿಸಿ ಕೊಟ್ಟಿರುತ್ತಾರೆ ಮನೆ ಬಾಗಿಲಿಗೆ ಬಂದು ಪಿಂಚಣಿ ಮಂಜೂರು ಮಾಡಿರುತ್ತಾರೆ. ಪಟ್ಟಣದ ಸ್ವಚ್ಚತೆಯಲ್ಲಿ ತೊಡಗಿರುತ್ತಾರೆ
ಬಾಲ ಕಾರ್ಮಿಕರ ರಕ್ಷಣೆ ಮಾಡಿರುತ್ತಾರೆ ಪರಿಸರ ಮಾಲಿನ್ಯ ಉಂಟು ಮಾಡುವ ಕಾರ್ಖಾನೆ ಮುಟ್ಟುಗೋಲು ಹಾಕಿಕೊಂಡಿರುತ್ತಾರೆ
ಕಡಲ್ಕೊರೆತದ ಬಗ್ಗೆ ರಕ್ಷಣಾ ಕಾರ್ಯ ಕೈಗೊಂಡಿರುತ್ತಾರೆ ವೃದ್ಧರಿಗೆ ಕಾಲು ಸಂಕ ಕಟ್ಟಿಕೊಟ್ಟಾರುತ್ತಾರೆ ಮಳೆಯಿಂದಾಗ ಮನೆ ಬಿದ್ದವರ ಮನೆಗೆ ಸಂತೈಸಿ ಪರಿಹಾರ ಮಂಜೂರು ಮಾಡಿರುತ್ತಾರೆ. ಪರಿಸರ ರಕ್ಷಣೆಗಾಗಿ “ಉಸಿರಿಗಾಗಿ ಹಸಿರು” ಅಭಿಯಾನದ ಮೂಲಕ ಗಿಡ-ಮರ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ. ಜನಸಾಮಾನ್ಯರ ಕಂದಾಯ ಕರ್ತವ್ಯಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿರುತ್ತಾರೆ
ನೀತಿ ಆಯೋಗ” ತಾಲ್ಲೂಕಿಗೆ ಭೇಟಿ ನೀಡಿ ನೆರೆ ಸಂರಕ್ಷಣಾ ಕಾರ್ಯಾಚರಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

*”ತಹಶಿಲ್ದಾರ್ ಮೇಡಂರವರು ಜನಸಾಮಾನ್ಯರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುತ್ತಾರೆ… ಮಾನವೀಯ ನೆಲೆಗಟ್ಟಿನಲ್ಲಿ ಜನರ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾರೆ… ಯಾರೇ ಕಚೇರಿಗೆ ಬಂದರೂ ಸಾವಧಾನವಾಗಿ ಸಮಸ್ಯೆ ಆಲಿಸಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಾರೆ… ಯಾವುದೇ ಹೊತ್ತಿನಲ್ಲಿ ಕರೆ ಮಾಡಿದರೂ ಸ್ಪಂದಿಸುತ್ತಾರೆ… ಇಂತಹವರು ನಮ್ಮ ತಾಲ್ಲೂಕಿನ ಜನರ ಭಾಗ್ಯ

*”ರಾಜ್ಯ ಮಟ್ಟದ ಪ್ರಶಸ್ತಿಯಾದ ವೀರ ಕನ್ನಡತಿ ಪ್ರಶಸ್ತಿ ದೊರಕಿರುವುದು ಸಂತಸದ ವಿಷಯ… ಪ್ರಾಮಾಣಿಕತೆಗೆ, ದಕ್ಷತೆಗೆ ಸಂದ ಗೌರವ… ಒಬ್ಬ ಸರ್ಕಾರಿ ಅಧಿಕಾರಿಗೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ… ಸಮಾಜದ ಮೇಲಿನ ಹೊಣೆಗಾರಿಕೆ ಹೆಚ್ಚಾಗಿದೆ.. ಇದು ಸಾರ್ವಜನಿಕ ವಲಯ ದಲ್ಲಿ ಕೇಳಿ ಬರುವ ಸತ್ಯ

Leave a Reply

Your email address will not be published. Required fields are marked *