×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪಡುಬೆಳ್ಳೆ : ನೂತನ ಧ್ವಜಸ್ತಂಭ ಉದ್ಘಾಟನೆ ಮತ್ತು ಸ್ವಾತಂತ್ರೋತ್ಸವ ಆಚರಣೆ

ಪಡುಬೆಳ್ಳೆ ಶ್ರೀನಾರಾಯಣ ಗುರು ಪ್ರಢಶಾಲೆಗೆ ಬೆಳ್ಳೆ ಸಿ. ಎ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಲಾಡಳಿತ ಸಮಿತಿಯ ಸದಸ್ಯರಾದ ಶಿವಾಜಿ ಎಸ್. ಸುವರ್ಣರು ಈ ಅವರ ಮಾತೃಶ್ರೀ ದಿ। ಶ್ರೀಮತಿ ಶಾರದಾ ಎಸ್, ಸುವರ್ಣರ ಸ್ಮರಣಾರ್ಥ ಕೊಡ ಮಾಡಿದ ನೂತನ ಧ್ವಜ ಸ್ತಂಭದ ಉದ್ಘಾಟನೆಯನ್ನು ಶ್ರೀ ಕಟ ತಾಡಿ ಶಂತರ ಪೂಜಾರಿಯವರು ನೆರವೇರಿಸಿದರು.ಶಿವಾಜಿ ಸುವರ್ಣರು ಧ್ವಜಾರೋಹಣ ಗೈದು,ಮಾತನಾಡಿದ ಭಾರತೀಯರಿಗೆ ಹೆಮ್ಮೆ ಮತ್ತು ಸಂತೋಷದ ದಿನವಾಗಿದೆ. ಈ ದಿನವನ್ನು ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರನ್ನು ಸ್ಮರಿಸಿ. ಅವರ ತ್ಯಾಗ ಮತ್ತು ಬಲಿದಾನಗಳನ್ನು ಗೌರವಿಸಲಾಗುತ್ತದೆ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಮಹಾತ್ಮರನ್ನು ಸ್ಮರಿಸಿ, ಅವರ ಆದರ್ಶಗಳನ್ನು ಪಾಲಿಸುವಂತೆ ಕರೆ ನೀಡಿದರು ಈ ಸಂದರ್ಭದಲ್ಲಿ ಧ್ವಜ ಸ್ತಂಭವನ್ನು ನಿರ್ಮಿಸಿದ ಕಂಟ್ರಾಕ್ಟರ್ ಮೂಡುಬೆಳ್ಳೆ ಶ್ರೀ ಗಣೇಶ ಆಚಾರ್ಯ ಅವರನ್ನು ಶಿವಾಜಿ.ಎಸ್ ಸುವರ್ಣರ ಶಾಲು ಹೊದಿಸಿ ಸನ್ಮಾನಿಸಿದರು

ಧ್ವಜಸ್ತಂಭ ವನ್ನು ನಿರ್ಮಿಸಿ ಕೊಟ್ಟ ಅವರನ್ನು ಶಾಲಾ ವತಿಯಿಂದ ಕೃತಜ್ಞತಾ ಪೂರ್ವಕ ಅಭಿನಂಧಿಸಲಾಯಿತು ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ದೇವಾಡಿಗ ಶಿಕ್ಷಕಿ ಅರುಂಧತಿ ಕಾರ್ಯಕ್ರಮ ನಿರೂಪಿಸಿದರು ಈ ಸಂದರ್ಭದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಕ ರಾಘವೇಂದ್ರ ಸಾಲಿಯಾನ್ ಆಡಳಿತ ಮಂಡಳಿ ಸದಸ್ಯ ಸುರೇಶ್ ಪೂಜಾರಿ ಶಿಕ್ಷಕಾರದ ಪಾಂಡುರಂಗ ಮಲ್ಯ ದುರ್ಗಯ ನಾಯಕ್ ಸುರೇಶ್ ನಾಯಕ್ ವಿಶಾಲಾಕ್ಷಿ ಸುಜಿತ್ ಕುಮಾರ್ ರಘು ನಿತ್ಯಾನಂದ ಆಚಾರ್ಯ ಪ್ರಸಾದ್ ಬಂಡಾರಿ ಧೀರಜ್ ಉಪಸ್ಥಿತರಿದ್ದರು ಉಷಾ ವಂದಿಸಿದರು ವಿದ್ಯಾರ್ಥಿಗಳ ಸಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಸಂಪನ್ನ ಗೊಂಡಿತು

Leave a Reply

Your email address will not be published. Required fields are marked *