
ಪಡುಬಿದ್ರಿ : ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ ಗುರುಮೂರ್ತಿ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಶನಿವಾರ ನಾರಾಯಣಗುರು ಮಂದಿರದಲ್ಲಿ ಧಾರ್ಮಿಕ ಕಾರ್ಯ, ಭಜನಾ ಕಾರ್ಯಕ್ರಮ ಜರಗಿತು.
ಪಡುಬಿದ್ರಿ ನಾರಾಯಣಗುರು ಮಹಿಳಾ ಮಂಡಳಿ, ಕಲ್ಲಟ್ಟೆ ಶ್ರೀ ಜಾರಂದಾಯ ಭಜನಾ ಮಂಡಳಿ, ಶ್ರೀ ದುರ್ಗಾ ಹೆಜಮಾಡಿ ಮಹಿಳಾ ಮಂಡಳಿ, ಗಾಯತ್ರಿ ಭಜನಾ ಮಹಿಳಾ ಮಂಡಳಿ ಪಾದೆಬೆಟ್ಟು, ಬ್ರಹ್ಮಶ್ರಿ ಭಜನಾ ಮಂಡಳಿ ಎರ್ಮಾಳು, ಅವರಾಲು ಭಜನಾ ಮಂಡಳಿ, ಉದಯಾದ್ರಿ ಮಹಿಳಾ ಭಜನಾ ಮಂಡಳಿ ಮತ್ತು ಶ್ರವಣ್ ಕುಮಾರ್ ತಂಡದಿಂದ ಕುಣಿತ ಭಜನಾ ಕಾರ್ಯಕ್ರಮ ಜರಗಿತು.